ರಾಣೆಬೆನ್ನೂರ: ತಾಲೂಕಿನಲ್ಲಿ 2024&25ನೇ ಸಾಲಿನಲ್ಲಿ 18 ಬಾಲಗಭಿರ್ಣಿಯರು ಪತ್ತೆಯಾಗಿದ್ದಾರೆ. ಪ್ರಸಕ್ತ ವರ್ಷ ಕೂಡ 3 ಬಾಲಗಭಿರ್ಣಿಯರು ದೊರೆತಿದ್ದಾರೆ. ಇದು ಬಹಳ ಆತಂಕಕಾರಿ ಬೆಳವಣಿಗೆಯಾಗಿದ್ದು ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಎ್ಐಆರ್ ದಾಖಲಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಡಾ. ಪುನೀತ್ ಬಿ.ಆರ್., ಸಿಡಿಪಿಒ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಪಂ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲಗಭಿರ್ಣಿಯರು ಹೇಗೆ ಪತ್ತೆಯಾಗಿದ್ದಾರೆ. ಹೆಚ್ಚಾಗಿ ಎಲ್ಲಿ ಕಂಡು ಬಂದಿದ್ದಾರೆ. ಎಷ್ಟು ಪ್ರಕರಣಗಳಲ್ಲಿ ಎ್ಐಆರ್ ದಾಖಲಿಸಿದ್ದೀರಿ ಎಂದು ಸಿಡಿಪಿಒ ಕಚೇರಿಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಸಿಡಿಪಿಒ ವೈ.ಟಿ. ಪೂಜಾರ ಅಧಿಕಾರಿ ಹಲಗೇರಿ ಭಾಗದಲ್ಲಿ ಬಹಳ ಕಂಡು ಬಂದಿದೆ. ಎಲ್ಲ ಪ್ರಕರಣಗಳಲ್ಲೂ ಕೇಸ್ ಮಾಡಲಾಗಿದೆ. ಇನ್ನೂ ಎರಡ್ಮೂರು ಪ್ರಕರಣ ಬಾಕಿಯಿವೆ ಎಂದು ಉತ್ತರಿಸಿದರು.
ಆಗ ಡಾ. ಪುನೀತ್ ಬಿ.ಆರ್., ಕೂಡಲೇ ಆ ಭಾಗದಲ್ಲಿ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಬೇಕು. ಬಾಲ ಗಭಿರ್ಣಿಯರಿಗೆ ಜನಿಸಿದ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಬಿಇಒ ಮತ್ತು ಸಿಡಿಪಿಒ ಜಂಟಿಯಾಗಿ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆ ಬಿಟ್ಟ ಹೆಣ್ಣುಮಕ್ಕಳ ಮೇಲೆ ವಿಶೇಷ ನಿಗಾವಹಿಸಬೇಕು. ಇದರಿಂದ ಬಾಲ್ಯವಿವಾಹದಂತಹ ಪ್ರಕರಣ ತಡೆಯಲು ಸಾಧ್ಯ ಎಂದು ಸೂಚಿಸಿದರು.
ನೋಟಿಸ್ ಜಾರಿಗೆ ಸೂಚನೆ...
ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಯಡಿ ಏಳು ಕಾಮಗಾರಿಗಳು ಮಂಜೂರಾಗಿ ಹಣ ಬಂದಿದ್ದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ ಎಂದು ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಎಇಇ ವಿರುದ್ಧ ಡಾ. ಪುನೀತ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಎಇಇ ರಾಮಪ್ಪ ದೊಡ್ಡಮನಿ, ನಾವು ಕಾಮಗಾರಿಯ ಯೋಜನಾ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಅಲ್ಲಿಂದ ಅನುಮೋದನೆ ದೊರೆತಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ. ಪುನೀತ್, ಕೂಡಲೇ ಇವರ ಕಾರ್ಯನಿರ್ವಾಹಕ ಇಂಜಿನಿಯರ್ಗೆ ನೋಟಿಸ್ ಜಾರಿ ಮಾಡಿ ಎಂದು ತಮ್ಮ ಸಿಬ್ಬಂದಿ ಸೂಚಿಸಿದರು.
ಕಳಪೆ ಕಾಮಗಾರಿ ಆರೋಪ...
ಗ್ರಾಮೀಣ ಭಾಗದಲ್ಲಿ ಜಲಜೀವನ ಮಷಿನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ಸಂಪರ್ಕ ಕಾಮಗಾರಿಯಲ್ಲಿ ಕಳಪೆ ಆಗಿದೆ ಎಂಬ ದೂರು ಬಹಳಷ್ಟು ಬಂದಿವೆ. ನೀವು ಕಾಮಗಾರಿ ಸ್ಥಳಕ್ಕೆ ಹೋಗಿ ಸರಿಯಾಗಿ ಪರಿಶೀಲನೆ ಮಾಡಬೇಕು ಎಂದು ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಎಇಇ ಜಯರಾಮ ಅವರನ್ನು ಡಾ. ಪುನೀತ್ ತರಾಟೆಗೆ ತೆಗೆದುಕೊಂಡರು.
ಆಗ ಜಯರಾಮ ಮಾನತಾಡಿ, ಅಸುಂಡಿ ಗ್ರಾಮದಲ್ಲಿ ಎರಡು ವರ್ಷದಿಂದ ಹಸ್ತಾಂತರ ಆಗಿದೆ. ಸ್ಥಳಕ್ಕೆ ಹೋಗಿ ನೋಡುತ್ತೇನೆ ಎಂದರು. ಇದರಿಂದ ಕೇರಳಿದ ಡಾ. ಪುನೀತ್, ಗುತ್ತಿಗೆದಾರಿಗೆ ಎಲ್ಲ ಹಣ ಪಾವತಿ ಮಾಡಿದ ನಂತರ ಯಾರು ಬರುತ್ತಾರೆ ಹೇಳಿ, ಈಗ ಕೆಲಸಕ್ಕೆ ದುಡ್ಡು ಕೊಟ್ಟು ಮಾಡಿಸಬೇಕಾ. ಟೆಂಡರ್ ಹಣ ಉಳಿಸಿಕೊಳ್ಳಬೇಕಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಕಲಿ ಬೀಜ ಪರಿಶೀಲಿಸಿ...
ತಾಲೂಕಿನಲ್ಲಿ ಮೆಕ್ಕೆಜೋಳ ಬಿತ್ತನೆ ಬೀಜ ನಕಲಿ ಎಂದು ಕಂಡು ಬಂದಾಗ ಏನು ಮಾಡುತ್ತೀರಿ ಎಂದು ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದಾಗ, ನಾವು ಧಾರವಾಡದ ಪ್ರಯೋಗಾಲಯಕ್ಕೆ ಕಳಿಸಿ ಪರೀೆ ಮಾಡಿಸುತ್ತೇವೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ತಿಳಿಸಿದರು. ಈಗ ಯಾವುದಾದರೂ ಅಂತಹ ನಕಲಿ ಮೆಕ್ಕೆಜೋಳ ಪ್ರಕರಣ ಕಂಡು ಬಂದಿದ್ದೇಯಾ ಎಂದು ಡಾ. ಪುನೀತ್ ಅವರು ಕೇಳಿದ ಪ್ರಶ್ನೆಗೆ ಶಾಂತಮಣಿ ಜಿ. ಸದ್ಯ ಅಂತಹ ಯಾವುದೆ ವರದಿ ಬಂದಿಲ್ಲ ಎಂದು ಹೇಳಿದ್ದು ಅಚ್ಚರಿ ಮೂಡಿಸಿತು. ಹೀಗಾಗಿ ನಕಲಿ ಬೀಜ ಮಾರಾಟ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಡಾ. ಪುನೀತ್ ಸೂಚಿಸಿದರು.
ತಾಪಂ ಇಒ ಪರಮೇಶ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.