ಶಿವಮೊಗ್ಗ ಕಮಲಾ ನೆಹರು ಕಾಲೇಜು ಪಕ್ಕದ ಖಾಲಿ ಜಾಗದ ಸ್ವಚ್ಛತೆ ಮಾಡಿಸುವಂತೆ ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಅವರು ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್‌ಗೆ ಸೂಚಿಸಿದರು. 
ನ್ಯೂಸ್

ಪಾಲಿಕೆ ಖಾಲಿ ನಿವೇಶನ ಅಭಿವೃದ್ಧಿಗೆ ಸೂಚನೆ

ಶಿವಮೊಗ್ಗ: ಕಮಲಾ ನೆಹರು ಮಹಿಳಾ ಕಾಲೇಜಿಗೆ ಹೊಂದಿಕೊಂಡಿರುವ ಪಾಲಿಕೆಯ ಖಾಲಿ ನಿವೇಶನಕ್ಕೆ ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಭೇಟಿ ನೀಡಿ ಪರಿಶೀಲಿಸಿದರು.

ನಗರ ಹೃದಯದ ಭಾಗದಲ್ಲಿ ನಿವೇಶನವು ತ್ಯಾಜ್ಯದಿಂದ ಕೂಡಿತ್ತು. ಪ್ಲಾಸ್ಟಿಕ್, ಮದ್ಯದ ಖಾಲಿ ಬಾಟಲಿಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಜಾಗದ ಸುತ್ತ ತಡೆಗೋಡೆ ನಿರ್ಮಿಸಿ, ನಿರ್ವಹಣೆ ಮಾಡುವಂತೆ ಸೂಚಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು, ಒಂದು ತಿಂಗಳ ಒಳಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಉಪಲೋಕಾಯುಕ್ತರು ಭೇಟಿ ನೀಡಿದ ಕೆಲವೇ ನಿಮಿಷಗಳಲ್ಲಿ ಪಾಲಿಕೆ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಎನ್‌ಇಎಸ್ ನಿರ್ದೇಶಕ ಎಂ.ಆರ್.ಅನಂತದತ್ತ, ಕುಲಸಚಿವ ಪ್ರೊ. ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಪ್ರಾಚಾರ್ಯ ಡಾ. ಆರ್.ಎಂ.ಜಗದೀಶ್, ಪಿಆರ್‌ಒ ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು.