ನ್ಯೂಸ್

ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನಲ್ಲ..ವಾಟ್ಸ್​ಆ್ಯಪ್ ಸ್ಟೇಟಸ್ ಹಾಕಿ ಪ್ರಾಣ ಬಿಟ್ಟ ವಿದ್ಯಾರ್ಥಿ

ಚೆನ್ನೈ:  ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನಲ್ಲ..ವಾಟ್ಸ್​ಆ್ಯಪ್ ಸ್ಟೇಟಸ್ ವಿದ್ಯಾರ್ಥಿಯೊಬ್ಬ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಪಶ್ಚಿಮ ಬಂಗಾಳದ ಐಐಟಿಯಲ್ಲಿ ನಡೆದಿದೆ.

ಸಚಿನ್ (32) ಮೃತ ವಿದ್ಯಾರ್ಥಿ. ಪಶ್ಚಿಮ ಬಂಗಾಳದ ಐಐಟಿಯಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ. ಈತ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುವ ಗಂಟೆಗಳ ಮೊದಲು, ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನಲ್ಲ' ಎಂದು ವಾಟ್ಸ್​ಆ್ಯಪ್ ಸ್ಟೇಟಸ್ ಪೋಸ್ಟ್ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ.

ವಾಟ್ಸ್​ಆ್ಯಪ್ ಸ್ಟೇಟಸ್ ನೋಡಿದ ಸ್ನೇಹಿತರು ಕೂಡಲೇ ಅವನ ಕೋಣೆಗೆ ಹೋಗಿ ನೋಡಿದರೆ, ಸಚಿನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಕರೆದೊಯ್ಯಲಾಯಿತು. ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಈ ವರ್ಷದಲ್ಲಿ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಮೂರನೇ ಆತ್ಮಹತ್ಯೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.