ಮಳವಳ್ಳಿ: ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜದಲ್ಲಿ ಗುರು ಶಿಷ್ಯರ ಸಂಬಂಧ ಜೀವನದ ಕೊನೆಯವರೆಗೂ ಗಟ್ಟಿಯಾಗಿರುವುದರ ಜತೆಗೆ ಗೌರವ ಭಾವನೆಗಳಿಂದ ಕೂಡಿರುತ್ತದೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ ತಿಳಿಸಿದರು.
ತಾಲೂಕಿ ಕೊಡಗಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕ ಜೆ.ರಾಜು ಮತ್ತು ಎಂ.ಎಸ್.ನಾಗೇಂದ್ರಸ್ವಾಮಿ ಅವರಿಗೆ ಭಾನುವಾರ ಶಾಲಾ ಆವರಣದಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರಿ ಕೆಲಸ ಪುಣ್ಯದ ಕೆಲಸ, ಸರ್ಕಾರಿ ಸೇವೆಯಲ್ಲಿ ಅದರಲ್ಲೂ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ನಾವು ಸೇವೆ ಸಲ್ಲಿಸುವ ಗ್ರಾಮದಲ್ಲಿ ಎಲ್ಲರನ್ನೂ ಗೌರವದಿಂದ ಪ್ರೀತಿಸಿದಾಗ ಮಾತ್ರ ಗ್ರಾಮಸ್ಥರ ಪ್ರೀತಿ, ಗೌರವ ಮತ್ತು ಸಹಕಾರ ಸಿಗುತ್ತದೆ ಎಂದರು.
ಶಿಕ್ಷಣ ಇಲಾಖೆಯ ಸಹೋದ್ಯೋಗಿಗಳು ಮತ್ತು ಗ್ರಾಮಸ್ಥರು ನಿವೃತ್ತಿ ಹೊಂದಿದ ಶಿಕ್ಷಕರಾದ ಜೆ.ರಾಜು, ಎಂ.ಎಸ್.ನಾಗೇಂದ್ರಸ್ವಾಮಿ ಅವರನ್ನು ಗೌರವಿಸಿದರು. ಸಮಾರಂಭದಲ್ಲಿ ಗ್ರಾ.ಪಂ.ಅಧ್ಯಕ್ಷ ಸಿದ್ಧರಾಜು, ಸದಸ್ಯೆ ನಾಗರತ್ನಮ್ಮ , ಕ್ಷೇತ್ರ ಸಮನ್ವಯಾಕಾರಿ ಶ್ರೀನಿವಾಸ್, ಬಿ.ಆರ್.ಪಿ ಬಾಬು, ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್, ಬಿ.ಜಿ.ಪುರ ಗ್ರಾಮ ಪಂಚಾಯಿತಿ ಪಿಡಿಒ ಜಯಸ್ವಾಮಿ, ಶಿಕ್ಷಣ ಸಂಯೋಜಕ ದಯಾನಂದ್, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಶಂಕರ್, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ, ತಾಲೂಕು ಅಧ್ಯಕ್ಷ ಚುಂಚಣ್ಣ, ಮುಖಂಡರಾದ ಶಾಂತರಾಜು, ಮಹದೇವು, ನೀಲಶೆಟ್ಟೆ, ಗೌಡರ ನಂಜುಂಡಸ್ವಾಮಿ ಸೇರಿದಂತೆ ಇತರರಿದ್ದರು.