Winter: ಸಾಮಾನ್ಯವಾಗಿ ಎಲ್ಲರು ಪ್ರತಿನಿತ್ಯ ಸ್ನಾನ ಮಾಡುತ್ತಾರೆ. ಇನ್ನು ಕೆಲವರು ಎರಡು ದಿನಕ್ಕೆ ಅಥವಾ ಮೂರು ದಿನಕ್ಕೊಮ್ಮೆ ಜಳಕ ಮಾಡುತ್ತಾರೆ. ಇನ್ನೂ ಕೆಲವರು ಅಸಡ್ಡೆಯಿಂದಲೋ ಅಥವಾ ಸೋಮರಿತನದಿಂದಲೋ ವಾರಕ್ಕೆ ಮತ್ತು 10 ದಿನಕ್ಕೆ ಮೈ ಮೇಲೆ ನೀರೆರೆಯಲು ಮುಂದಾಗುತ್ತಾರೆ. ಇನ್ನು ತಿಂಗಳಾನುಗಟ್ಟಲೆ ಸ್ನಾನ ಮಾಡದೆ ಇರುವವರು ಇದ್ದಾರೆ ಎಂದು ಅಗ್ಗಾಗೆ ವರದಿಯಾಗುತ್ತಲೇ ಇರುತ್ತದೆ. ಇದೀಗ ಇದೆಲ್ಲದರ ನಡುವೆ ಚಳಿಗಾಲ ಸಮಯದಲ್ಲಿ ಸ್ನಾನ ಮಾಡದೆ ಇದ್ದರೆ ಅವರ ಜೀವಿತಾವಧಿ ಶೇ.34ರಷ್ಟು ಹೆಚ್ಚಿಸಬಹುದು ಎಂದು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡುತ್ತಿದೆ. ಇ ವಿಡಿಯೋದ ಅಸಲಿಯತ್ತು ಏನು ಎಂಬುವುದು ತಿಳಿಯೋಣ ಬನ್ನಿ..
ಡಾ.ರೆಬಿಕಾ ಪಿಂಟೋ ಹಂಚಿಕೊಂಡಿರುವ ವಿಡಿಯೋದಲ್ಲಿ ಚಳಿಗಾಲದಲ್ಲಿ ಸ್ನಾನ ಮಾಡದೇ ಇರುವುದು ಕೆಟ್ಟದಲ್ಲ. ಏಕೆಂದರೆ ಅದು ನಿಮ್ಮ ಜೀಬಿತಾವಧಿಯನ್ನು ಶೇ.34 ಹೆಚ್ಚಿಸುತ್ತದೆ ಎಂದು ಅದು ನಿಮಗೆ ತೊರಿಸುತ್ತದೆ. ವಿಡಿಯೋ ನೋಡಲು ತುಂಬಾ ಚೆನ್ನಾಗಿದೆ. ವಿಡಿಯೋ ಹರಿಬಿಟ್ಟದ ಕೆಲದಿನಗಳಲ್ಲೆ 6.6 ಮಿಲಿಯನ್ ವಿಕ್ಷಣೆಗಳನ್ನು ಪಡೆದುಕೊಂಡಿದೆ.ಈ ವಿಡಿಯೋ ನೋಡಿದ ಬಳಿಕ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು(ನೆಟ್ಟಿಜನ್ಸ್) ಅನುಮಾನ ಮತ್ತು ಸಂದೇಹಹವನ್ನು ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಯಾವುದೇ ಸಂಶೋಧನೆ ಲೇಖನ ಇದೆಯೇ? ಅಥವಾ ಪುಷ್ಟಿ ನೀಡುವ ಪುರಾವೆ ಇದೆಯೇ? ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಇದನ್ನೂ ಓದಿ: Guarantee Scheme: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ, ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಅಸಮಧಾನ
ವಿಡಿಯೋದಲ್ಲಿ ಯಾವುದೇ ದಾಖಲೆ, ಪುರಾವೆ ಮತ್ತು ಸಾಕ್ಷಿಗಳಿಲ್ಲದೆ ಮಾತಮಾಡುತ್ತಿದ್ದಾರೆ. ಈ ವಿಡಿಯೋದ ಮಾಹಿತಿ ನಿಮ್ಮ ವೈಯಕ್ತಿತೆಗೆ ಸಂಬಂಧಪಟ್ಟಿದ್ದು, ಅದಷ್ಟೂ ಇಂತಹ ಕೆಟ್ಟ ಮಾಹಿತಿಯಿಂದ ದೂರವಿರಿ ಎಂದು ಬಳಕೆದಾರು ಕಾಮೆಂಟ್ಗಳ ಸುರಿಮಳೆಗೈದಿದ್ದಾರೆ.
ವೈದ್ಯರು ಹೇಳೊದೇನು?
ಅಗ್ಗಾಗೆ ಸ್ನಾನ ಮಾಡುವುದರಿಂದ ನಿಮ್ಮ ದೇಹದ ಮೇಲೆ ಇರುವ ಸೂಕ್ಷ್ಮಾಣುಜೀವಿಗಳಿಗೆ ಹಾನಿಯಾಗಬಹುದು. ಆದರೆ,ಚಳಿಗಾಲದಲ್ಲಿ ಸಂಪೂರ್ಣ ಸ್ನಾನ ಮಾಡದೆ ಇರುವುದು ಹಾನಿಕಾರಿಕ ಎಂದು ವೈದ್ಯರ ತಂಡ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಈ ಕೂಡಲೇ ಕೋಚ್ ಸ್ಥಾನದಿಂದ ಗಂಭೀರ್ರನ್ನು ಕೆಳಗಿಳಿಸಿ! ಬಿಸಿಸಿಐಗೆ ಮಾಜಿ ಕ್ರಿಕೆಟಿಗನ ಸಲಹೆ | Gautam Gambhir
ಶೇ.34ರಷ್ಟು ಜೀವಿತಾವಧಿ ಅಧಿಕ ಕಾರಣಕ್ಕೆ ಯಾವುದೇ ವೈಜ್ನಾನಿಕ ಪುರಾವೆ ಇಲ್ಲ. ಸಂಪೂರ್ಣ ಸ್ನಾನ ಬಿಟ್ಟುಬಿಡುವುದು ಸೋಂಕಿಗೆ ಮತ್ತು ಚರ್ಮರೋಗಕ್ಕೆ ಕಾರಣವಾಗಬಹದು ಎಂದು ಕೆಲ ತಜ್ನರ ವರದಿ.(ಏಜೆನ್ಸೀಸ್)