ನ್ಯೂಸ್

ದೆಹಲಿ ಧ್ವಜರೋಹಣ: ಅತಿಶಿ ಬದಲು ಗೃಹ ಸಚಿವ ಕೈಲಾಶ್ ಗೆಹಲೋತ್ ಆಯ್ಕೆ ಮಾಡಿದ ಲೆ.ಗವರ್ನರ್ ಸಕ್ಸೇನಾ​ !

ನವದೆಹಲಿ: ದೆಹಲಿ ಸರ್ಕಾರ ಆಯೋಜಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಲು ಸಚಿವೆ ಅತಿಶಿ ಬದಲು, ಗೃಹ ಸಚಿವ ಕೈಲಾಶ್ ಗೆಹಲೋತ್ ಅವರ ಹೆಸರನ್ನು ಲೆಫ್ಟಿನೆಂಟ್‌ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಅಂತಿಮಗೊಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದು ತನ್ನ ಅನುಪಸ್ಥಿತಿಯಲ್ಲಿ ಶಿಕ್ಷಣ ಸಚಿವೆ ಅತಿಶಿ ದೆಹಲಿ ಸರ್ಕಾರದ ಪರವಾಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಘೋಷಿಸಿದ್ದರು. ಆದರೆ ಲೆ.ಗ. ಸಕ್ಸೇನಾ ಅವರು ಕೇಜ್ರಿವಾಲ್ ಅವರ ನಿರ್ದೇಶನ ತಿರಸ್ಕರಿಸಿದ್ದರು.

ಈ ವಿಚಾರದಲ್ಲಿ ಲೆ.ಗವರ್ನರ್​ ಸಕ್ಸೇನಾ ಅವರ ಕಚೇರಿ ಮಂಗಳವಾರ ಸಂಜೆ ಪ್ರಕಟಣೆ ಹೊರಡಿಸಿದ್ದು ಗೃಹ ಸಚಿವ ಗೆಹ್ಲೋಟ್​ ಅವರನ್ನು ಧ್ವಜಾರೋಹಣ ನೆರವೇರಿಸಲು ನೇಮಕ ಮಾಡಲಾಗಿದ್ದು, ಧ್ವಜಾಎರೋಹಣದ ನಂತರ ದೆಹಲಿ ಪೊಲೀಸರು ಜಾಥಾ ನಡೆಸಲಿದ್ದಾರೆ. ಈ ಕುರಿತು ಗೃಹ ಸಚಿವ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದೆ. ಇದರಿಂದ ಲೆಫ್ಟಿನೆಂಟ್​ ಗವರ್ನರ್​ ನಡುವೆ ಮತ್ತೊಂದು ಸುತ್ತಿನ ಜಟಾಟಿಗೆ ವೇದಿಕೆ ಸಿದ್ಧವಾದಂತಾಗಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸಲು ಲೆ.ಗವರ್ನರ್​ ಸಕ್ಸೇನಾ ಅವರು ಗೃಹ ಸಚಿವ ಕೈಲಾಶ್ ಅವರನ್ನು ನೇಮಕ ಮಾಡಿರುವುದಾಗಿ ವರದಿ ವಿವರಿಸಿದೆ. ಈ ಹಿನ್ನೆಲೆಯನ್ನು ಕಾರ್ಯಕ್ರಮಕ್ಕೆ ಅಗತ್ಯವಿರುವ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತದೆ ಎಂದು ಸಕ್ಸೆನಾ ಅವರ ಕಾರ್ಯದರ್ಶಿ ಅಶಿಶ್ ಕುಂದ್ರ ತಿಳಿಸಿದ್ದಾರೆ.