ಬೆಂಗಳೂರು: ಭಾರತದ ಮೋಡಿ ಮಾಡುವ ಸೌಂದರ್ಯ ನೋಡಿ ಜಗತ್ತು ಮತ್ತೊಮ್ಮೆ ಬೆರಗುಗೊಂಡಿದೆ. ನಾರ್ವೆಯ ರಾಜತಾಂತ್ರಿಕ ಅಧಿಕಾರಿ ಎರಿಕ್ ಸೋಲ್ಹೈಮ್, ಇತ್ತೀಚೆಗೆ ಉಡುಪಿ ರೈಲ್ವೆ ಮಾರ್ಗದ ರಮಣೀಯ ಡ್ರೋನ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸೋಲ್ಹೈಮ್ ಅವರು ಬುಧವಾರ ಟ್ವಿಟರ್‌ನಲ್ಲಿ ಕ್ಲಿಪ್ ಹಂಚಿಕೊಂಡಿದ್ದು 86,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 4,000 ಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದೆ.
"ಇನ್‌ಕ್ರೆಡಿಬಲ್ ಇಂಡಿಯಾ! ಎಲ್ಲಿಯಾದರೂ ಹಸಿರು ರೈಲು ಮಾರ್ಗವಿದೆಯೇ? ಬೆಂಗಳೂರು-ಉಡುಪಿ ರೈಲು ಮಾರ್ಗ, ಸಕಲೇಶಪುರದಿಂದ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ," ಎಂದು ಇವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಛಾಯಾಗ್ರಾಹಕ ರಾಜ್ ಮೋಹನ್ ರಚಿಸಿರುವ ಈ ವಿಡಿಯೋ, ಉಡುಪಿ ರೈಲ್ವೇ ಮಾರ್ಗದ ಮೋಡಿಮಾಡುವ ಮಾರ್ಗವನ್ನು ಸೆರೆಹಿಡಿದಿತ್ತು. ಇದು ಹಚ್ಚ ಹಸಿರಿನ ಕಾಡು, ಪರ್ವತಗಳ ಮೂಲಕ ರೈಲು ಹಾದು ಹೋಗುವುದನ್ನು ತೋರಿಸುತ್ತದೆ. ಈ ವಿಡಿಯೋ ನೋಡುಗರಿಗೆ ನಾವು ಅಲ್ಲೇ ಇದ್ದೇವೆ ಎನ್ನುವಂತಹ ಅನುಭವ ನೀಡುತ್ತದೆ.
ಸುಂದರವಾದ ರೈಲು ಮಾರ್ಗದ ವೈಮಾನಿಕ ನೋಟವು ಇಂಟರ್ನೆಟ್ ಬಳಕೆದಾರರನ್ನು ಬೆರಗುಗೊಳಿಸಿದ್ದು. ಈ ವಿಡಿಯೋಗೆ ಕಾಮೆಂಟ್ ಮಾಡಿರುವ ಒಬ್ಬರು, "ಅದ್ಭುತ... ಉಸಿರು ಬಿಗಿ ಹಿಡಿಸುವ ಸೌಂದರ್ಯ" ಎಂದಿದ್ದಾರೆ.