ಆನಂದಪುರ ಸಮೀಪದ ಐಗಿನಬೈಲು ಗ್ರಾಮದಲ್ಲಿ ಶ್ರೀ ಗಾಮೇಶ್ವರ ದೇವರಿಗೆ ನೋನಿ ಪೂಜೆ ಸಲ್ಲಿಸಿರುವುದು. 
ನ್ಯೂಸ್

ಐಗಿನಬೈಲಿನಲ್ಲಿ ನೋನಿ ಹಬ್ಬ

ಆನಂದಪುರ: ಹೊಸೂರು ಗ್ರಾಪಂನ ಐಗಿನಬೈಲು ಗ್ರಾಮದಲ್ಲಿ ಗ್ರಾಮ ದೇವತೆ ಪೂಜೆ ನೋನಿ ಹಬ್ಬವನ್ನು ಆಚರಿಸಲಾಯಿತು.

ಪ್ರತಿ ವರ್ಷ ಬಲಿಪಾಡ್ಯಮಿ ದಿನ ನೋನಿ ಹಬ್ಬ ಆಚರಿಸುವ ಸಂಪ್ರದಾಯವಿದೆ. ಗ್ರಾಮದೇವರ ಬನವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ 60ಕ್ಕೂ ಅಧಿಕ ಕುಟುಂಬದ ಸದಸ್ಯರು ಆಗಮಿಸಿ ಹಣ್ಣು ಕಾಯಿ, ಬಲಿ ನೈವೇದ್ಯ ಸಮರ್ಪಿಸಿ ಗ್ರಾಮದ ಸರ್ವರ ಒಳಿತಿಗಾಗಿ ಪ್ರಾರ್ಥಿಸಿದರು.

ಗ್ರಾಮದೇವರಾದ ಶ್ರೀ ಗಾಮೇಶ್ವರ ದೇವರ ಸಾನಿಧ್ಯಕ್ಕೆ 300 ವರ್ಷಗಳ ಇತಿಹಾಸವಿದೆ. ಈ ದೇವರಿಗೆ ಪೂಜೆ ನಡೆದ ಬಳಿಕ ಗ್ರಾಮವ್ಯಾಪ್ತಿಯಲ್ಲಿ ಇರುವ ಚೌಡಮ್ಮ, ಭೂತೇಶ್ವರ, ರಣಭೈರವ, ಕಾಲಭೈರವ ದೇವರು ಸೇರಿ 60 ದೇವರ ಸ್ಥಳಗಳಲ್ಲಿ ಹಣ್ಣು ಕಾಯಿ ಸಲ್ಲಿಸಿ ಪೂಜೆ ನಡೆಸುವ ರೂಢಿಯಿದೆ.