ನ್ಯೂಸ್

ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ನಾಳೆ

ಬೆಂಗಳೂರು: ಜೆ.ಪಿ.ನಗರ 4ನೇ ಹಂತ ಮೆಟ್ರೋ ನಿಲ್ದಾಣ ಸಮೀಪದ ಬನ್ನೇರುಘಟ್ಟ ರಸ್ತೆಯಲ್ಲಿ ಹೊಸದಾಗಿ 900 ಮಿ.ಮೀ. ವ್ಯಾಸದ ನೀರಿನ ಕೊಳವೆ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಈ ಕೊಳವೆ ಮಾರ್ಗಕ್ಕೆ ಜೋಡಣೆ ಕೆಲಸ ಕೈಗೆತ್ತಿಕೊಳ್ಳುವುದರಿಂದ ಶನಿವಾರ (ಆ.26) ಆ ಭಾಗದ ಹಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.


ಜೆ.ಪಿ.ನಗರ 3ರಿಂದ 7ನೇ ಘಟ್ಟ, ಅರಕೆರೆ ಮೈಕೋ ಲೇಔಟ್, ವಿಜಯಾ ಬ್ಯಾಂಕ್ ಕಾಲೊನಿ, ಹುಳಿಮಾವು, ಬಿಳೇಕಹಳ್ಳಿ, ಕೋಣನಕುಂಟೆ, ಚುಂಚಘಟ್ಟ, ಜರಗನಹಳ್ಳಿ, ರಂಕಾ ಕಾಲೊನಿ, ಜಯನಗರ 4ನೇ ಟಿ ಬ್ಲಾಕ್, ತಿಲಕ್‌ನಗರ, ಎಸ್.ಆರ್.ಕೃಷ್ಣಪ್ಪ ಗಾರ್ಡನ್, ಬಿಟಿಎಂ 2ನೇ ಹಂತ, ಮಡಿವಾಳ, ಡಾಲರ್ಸ್ ಕಾಲೊನಿ, ಗುರಪ್ಪನಪಾಳ್ಯ, ತಾವರೆಕೆರೆ, ಬಿಸ್ಮಿಲ್ಲಾನಗರ, ಎಚ್‌ಎಸ್‌ಆರ್ ಲೇಔಟ್‌ನ 1ರಿಂದ 7ನೇ ಸೆಕ್ಟರ್, ಮಂಗಮ್ಮನಪಾಳ್ಯ. ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಳ 1ರಿಂದ 4ನೇ ಬ್ಲಾಕ್, ಬೆಳ್ಳಂದೂರು, ಜಕ್ಕಸಂದ್ರ, ಎಸ್.ಟಿ.ಬೆಡ್, ವೆಂಕಟಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ ಎಂದು ಜಲಮಂಡಳಿ ತಿಳಿಸಿದೆ.