ಒಳ ಮೀಸಲಾತಿಗಾಗಿ ನಡೆಸುತ್ತಿರುವ ಕ್ರಾಂತಿಕಾರಿ ರಥಯಾತ್ರೆಗೆ ಪೂರ್ಣ ಅದ್ದೂರಿ ಸ್ವಾಗತ ಕೋರಲಾಯಿತು.  
ನ್ಯೂಸ್

ಒಳ ಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿ ಬೇಡ

Vijayapura - Desk - Shamarao Kulkarni

ನಾಲತವಾಡ: ಒಳಮೀಸಲಾತಿ ಜಾರಿ ಆಗುವವರೆಗೂ ನೇಮಕಾತಿ, ಬಡ್ತಿ ನೀಡಬಾರದು ಎಂದು ಆಗ್ರಹಿಸಿ ಕ್ರಾಂತಿಕಾರಿ ರಥಯಾತ್ರೆ ಹಮ್ಮಿಕೋಲ್ಳಲಾಗಿದೆ ಎಂದು ಡಿಎಸ್​ಎಸ್​ಮುಖಂಡ ಮಾರುತಿ ಸಿದ್ಧಾಪುರ ಹೇಳಿದರು.

ಪಟ್ಟಣದ ಶರಣ ವೀರೇಶ್ವರರ ವೃತ್ತ್ತದಲ್ಲಿ ಕ್ರಾಂತಿಕಾರಿ ರಥಯಾತ್ರೆಯಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಮೇ 31ರೊಳಗಾಗಿ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಜೂನ್​ 9ರಂದು ಮಾದಿಗ ಸಮಾಜದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಕೆ.ಆರ್​.ಉಮೇಶ ಮಾತನಾಡಿ, ಒಳ ಮೀಸಲಾತಿ ನಮ್ಮ ಸಮಾಜದ ಮಕ್ಕಳ ಅಳಿವು ಉಳಿವಿನ ಪ್ರಶ್ನೆ. ಹಾಗಾಗಿ, ಜಾತಿ ಸಮೀೆಗೆ ಬಂದ ಸಂದರ್ಭದಲ್ಲಿ ಮಾದಿಗ ಅಂತಲೇ ಬರೆಯಿಸಬೇಕು. ನಿಖರ ಜನಸಂಖ್ಯೆ ತೋರಿಸಿ ಶೈಣಿಕ, ಸಾಮಾಜಿಕ, ಆರ್ಥಿಕ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾಗರಾಜ ಗುಡೆಮಾರನಹಳ್ಳ್ಳಿ, ಮುಖಂಡರಾದ ತೇಜು ನೆಲಮಂಗಲ, ಸಿದ್ದಪ್ಪ ಕಟ್ಟಿಮನಿ, ಮಂಜುನಾಥ ಕಟ್ಟಿಮನಿ, ಗುಂಡಪ್ಪ ಚಲವಾದಿ, ಸಿದ್ದು ಕಟ್ಟಿಮನಿ, ನೀಲಪ್ಪ ಸಿದ್ದಾಪುರ,ರಾವೇಂದ್ರ ಮಾದರ, ರಾಜು ಮಸಿಬನಾಳ, ಮಂಜುನಾಥ ಕಟ್ಟಿಮನಿ, ಶಿವಪ್ಪ ಜಾಲಿಗಿಡ, ಮಹಾದೇವ ಶಾಂತಗೀರಿ, ಗುಂಡಪ್ಪ ಚಲವಾದಿ,ಪ್ರವಿಣ ಶಾಂತಗಿರಿ, ಸದಾಶಿವ ಕಟ್ಟಿಮನಿ, ಶಿವಪ್ಪ ಸಿದ್ದಾಪುರ, ಬೈಲಪ್ಪ ಜಾಲಿಗಿಡ, ಗಂಗಪ್ಪ ಲೊಟಗೇರಿ, ಆರ್​.ಉಮೇಶ, ನಾಗರಾಜ ಗುಡೆಮಾರನಹಳ್ಳಿ, ಬಸಪ್ಪ ನಾಗರಬೆಟ್ಟ, ದುರಗಪ್ಪ ದೊಡಮನಿಇತರರು ಇದ್ದರು.