ನ್ಯೂಸ್

'ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ, ಎರಡೂ ಕಡೆಗಳಲ್ಲಿ ಮುಗ್ಧರು ಸಾಯುತ್ತಾರೆ' ಭಾರತ-ಪಾಕ್​​ ಉದ್ವಿಗ್ನತೆ ಶಮನಕ್ಕಾಗಿ ಕಾಶ್ಮೀರಿ ನಟಿ ಪ್ರಾರ್ಥನೆ| Hina Khan

Hina Khan: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಕಡಿಮೆಯಾಗುವ ಆಶಯದೊಂದಿಗೆ ಹಿನಾ ಖಾನ್ ಶುಕ್ರವಾರ (ಮೇ.9) ತಮ್ಮ ಇನ್‌ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಶ್ಮೀರದ ಆಗಿರುವ ನಟಿ ಹಿನಾ ಖಾನ್, ಭಾರತ ಯುದ್ಧವನ್ನು ಬಯಸದಿದ್ದರೂ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ನಾವು ಪ್ರತೀಕಾರ ತೀರಿಸಿಕೊಳ್ಳಬೇಕಾಯಿತು ಎಂದು . ಭಾರತೀಯ ಸೇನೆಗೆ ಬೆಂಬಲವಾಗಿ ನಿಲ್ಲುವುದಾಗಿ ಹಿನಾ ಸ್ಪಷ್ಟಪಡಿಸಿದ್ದಾರೆ ಜೊತೆಗೆಶಾಂತಿಗಾಗಿಯೂ ಆಶಿಸಿದ್ದಾರೆ.

"ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ, ಎರಡೂ ಕಡೆಗಳಲ್ಲಿ ಮುಗ್ಧರು ಸಾಯುತ್ತಾರೆ ಎಂದು ಹಿನಾ ಬರೆದು ನಂತರ , "ಪಹಲ್ಗಾಮ್ ಮೊದಲು ನಮಗೆ ಯುದ್ಧ ಬೇಕಾಗಿರಲಿಲ್ಲ ಆದರೆ ಈಗ ನಮ್ಮ ಜನರು ಕೊಲ್ಲಲ್ಪಟ್ಟಿದ್ದಾರೆ. ನಮಗೀಗ ಪ್ರತಿಕ್ರಿಯೆ ಮುಖ್ಯವಾಗಿದೆ. ನಾವು ಹಿಂಸೆಯನ್ನು ಉತ್ತೇಜಿಸುವುದಿಲ್ಲ... ಮತ್ತು ನಾವೆಲ್ಲರೂ ಅಂತಿಮವಾಗಿ ಶಾಂತಿಯನ್ನು ಬಯಸುತ್ತೇವೆ ಎಂದು ನನಗೆ ತಿಳಿದಿದೆ." ಅವರು ಭಾರತವನ್ನು ಬೆಂಬಲಿಸಿದ್ದಾರೆ. ಆದರೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒತ್ತಾಯಿಸಿದ್ದು,

"ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ನಾನು ನನ್ನ ದೇಶದೊಂದಿಗೆ ನಿಂತಿರುವಷ್ಟೇ. ಎಂದು ಬರೆದಿದ್ದಾರೆ.

ಹಿನಾ ಜೊತೆಗೆ, ಹಲವಾರು ಇತರ ಸೆಲೆಬ್ರಿಟಿಗಳು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದವರು ಸಹ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಟ್ಯಾಂಡ್-ಅಪ್ ಹಾಸ್ಯನಟ ಸಮಯ್ ರೈನಾ ಕೂಡ ಎಲ್ಲರೂ ಭಾರತೀಯ ಸೇನೆಯ ಮೇಲೆ ನಂಬಿಕೆ ಇಡಬೇಕೆಂದು ಒತ್ತಾಯಿಸಿದ್ದಾರೆ.

ಗುರುವಾರ ಸಂಜೆ ಪಾಕಿಸ್ತಾನವು ಜಮ್ಮು ನಾಗರಿಕ ವಿಮಾನ ನಿಲ್ದಾಣ, ಸಾಂಬಾ, ಆರ್‌ಎಸ್ ಪುರ, ಅರ್ನಿಯಾ ಮತ್ತು ಈ ಪ್ರದೇಶದ ಮಿಲಿಟರಿ ಕೇಂದ್ರಗಳು ಸೇರಿದಂತೆ ಹನ್ನೆರಡು ಸ್ಥಳಗಳನ್ನು ಗುರಿಯಾಗಿಸಿಕೊಂಡು ಸರಣಿ ವೈಮಾನಿಕ ದಾಳಿ ನಡೆಸಿದ ನಂತರ ಹಿನಾ ಖಾನ್ ಅವರ ಉದ್ವಿಗ್ನತೆಯನ್ನು ಶಮನಗೊಳಿಸುವ ಪೋಸ್ಟ್ ಮಾಡಿದ್ದಾರೆ. ಆಪರೇಷನ್ ಸಿಂಧೂರ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ನಿಖರವಾದ ದಾಳಿ ನಡೆಸಿದ ಒಂದು ದಿನದ ನಂತರ ಈ ದಾಳಿಗಳು ನಡೆದಿವೆ. (ಏಜೆನ್ಸೀಸ್​)