ನ್ಯೂಸ್

3 ವರ್ಷ ಹೊಸ ಕಾನೂನು ಕಾಲೇಜು ತೆರೆಯುವಂತಿಲ್ಲ: ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿರ್ಬಂಧವೇನು?

ಬೆಂಗಳೂರು: ಕಾನೂನು ಶಿಕ್ಷಣ ಗುಣಮಟ್ಟ ಕುಸಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ಮುಂದಿನ ಮೂರು ವರ್ಷಗಳ ಅವಧಿಗೆ ದೇಶಾದ್ಯಂತ ಯಾವುದೇ ನೂತನ ಕಾನೂನು ಕಾಲೇಜುಗಳನ್ನು ತೆರೆಯುವಂತಿಲ್ಲ ಎಂದು ಬಾರ್ ಕೌನ್ಸಿಲ್ ಆ್ ಇಂಡಿಯಾ (ಬಿಸಿಐ) ನಿರ್ಬಂಧ ವಿಧಿಸಿದೆ.

ಈ ಅವಧಿಯಲ್ಲಿ ದೇಶದ ಯಾವುದೇ ಭಾಗದಲ್ಲಿ ಕಾನೂನು ಶಿಕ್ಷಣದ ಹೊಸ ಕಾಲೇಜುಗಳನ್ನು ಸ್ಥಾಪಿಸುವಂತಿಲ್ಲ ಅಥವಾ ತೆರೆಯಲು ಅನುಮತಿ ನೀಡುವಂತಿಲ್ಲ. ಜತೆಗೆ, ಈಗಾಗಲೇ ಕಾರ್ಯಾಚರಿಸುತ್ತಿರುವ ಸಂಸ್ಥ್ಥೆಗಳು ಹೊಸ ಕೋರ್ಸ್, ಸೆಕ್ಷನ್ ಅಥವಾ ಬ್ಯಾಚ್‌ಗಳನ್ನು ಕೌನ್ಸಿಲ್‌ನ ಅನುಮೋದನೆ ಇಲ್ಲದೆ ಆರಂಭಿಸುವಂತಿಲ್ಲ. ಈಗಾಗಲೇ ಅನುಮೋದನೆ ಕೋರಿ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳನ್ನು ಕಟ್ಟುನಿಟ್ಟಿನ ಪರಿಶೀಲನೆಗೆ ಒಳಪಡಿಸಲಾಗುವುದು ಜತೆಗೆ ಹಾಲಿ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ. ಆದರೆ, ಈಗಾಗಲೇ ಅರ್ಜಿ ಸಲ್ಲಿಸಿ ಬಾಕಿಯಾಗಿರುವುದಕ್ಕೆ ಇದು ಅನ್ವಯವಾಗದು. ಅವುಗಳನ್ನು ನಿಯಮಾವಳಿಗಳ ಪ್ರಕಾರ ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಉದ್ದೇಶಗಳೇನು?

ರಾಜ್ಯದ 151 ಸೇರಿ ದೇಶದಲ್ಲಿ ಒಟ್ಟು ಎರಡು ಸಾವಿರಕ್ಕೂ ಅಧಿಕ ಕಾನೂನು ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಸದ್ಯದ ಅಗತ್ಯಗಳನ್ನು ಪೂರೈಸಲು ಈ ಪ್ರಮಾಣ ಸಾಕಾಗುತ್ತದೆ. ಹೀಗಾಗಿ ಸಾರ್ವಜನಿಕ ಹಿತಾಸಕ್ತಿ ಹಾಗೂ ಸಾಂವಿಧಾನಿಕ ಬಾದ್ಯತೆಗಳಿಗಾಗಿ ಇವುಗಳ ಏಕೀಕರಣ, ಗುಣಮಟ್ಟದ ವೃದ್ಧಿ, ವ್ಯವಸ್ಥೆಗಳನ್ನು ಬಲವರ್ಧಿಸುವ ಕಾರ್ಯದತ್ತ ಗಮನ ನೀಡಬೇಕಾಗಿದೆ ಎಂದು ಮಂಡಳಿ ತಿಳಿಸಿದೆ.

1961ರ ವಕೀಲರ ಕಾಯ್ದೆಯ ವಿವಿಧ ನಿಯಮಗಳ ಅನ್ವಯ ದೇಶದಲ್ಲಿ ಕಾನೂನು ಶಿಕ್ಷಣದ ಗುಣಮಟ್ಟ ಕಾಪಾಡುವುದು, ವೃತ್ತ ಸಮಗ್ರತೆಯನ್ನು ಸಂರಕ್ಷಿಸುವುದು, ನಿರ್ವಹಿಸುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರ ಹಿತವನ್ನು ರಕ್ಷಿಸುವುದು ಮಂಡಳಿಯ ಕರ್ತವ್ಯವಾಗಿದೆ. ಈ ನಿಯಮಗಳ ಅಧಿಕಾರದ ಆಧಾರದಲ್ಲಿ ‘ನಿರ್ಬಂಧ’ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮಂಡಳಿ ಉಲ್ಲೇಖಿಸಿದೆ.

ಹೈಕೋರ್ಟ್ ತೀರ್ಪೂ ಆಧಾರ:

2019ರಲ್ಲಿ ಕೈಗೊಂಡಿದ್ದ ತಾತ್ಕಾಲಿಕ ನಿರ್ಬಂಧ ಕ್ರಮ ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2020ರ ಡಿಸೆಂಬರ್‌ನಲ್ಲಿ ನೀಡಿದ ತೀರ್ಪು ಹಾಗೂ ರಾಜ್ಯ ಸರ್ಕಾರಗಳು ಹಾಗೂ ವಿಶ್ವದ್ಯಾಲಯಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಮನವಿಗಳನ್ನು ಮಂಡಳಿ ಪ್ರಸ್ತಾಪಿಸಿದೆ.

ಹಲವು ವಿಭಾಗಗಳಿಗೆ ವಿನಾಯ್ತಿ:

ಮೂರು ವರ್ಷಗಳ ನಿರ್ಬಂಧ ವಿಧಿಸಿದ್ದರೂ ಕೆಲ ವಿನಾಯ್ತಿಗಳಿಗೂ ಇದರಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗಾಗಿ, ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳು, ಆರ್ಥಿಕ ದುರ್ಬಲ ವರ್ಗಗಳು, ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಕೈಗೊಂಡ ನಿರ್ಣಯಗಳು, ಹಿಂದುಳಿದ, ಬುಡಕಟ್ಟು ಹಾಗೂ ಮಹಾತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಸಂಬಂಧಿಸಿದ್ದೆಂದು ಸಕ್ಷಮ ಪ್ರಾಧಿಕಾರವು ೋಷಿಸಿದ, ಅಂಗವಿಕಲರಿಗಾಗಿಯೇ ರೂಪಿಸಲಾದ ಕೋರ್ಸ್‌ಗಳು, ರಾಜ್ಯ ಅಥವಾ ಕೇಂದ್ರ ಸರ್ಕಾರಿ ವಿಶ್ವವಿದ್ಯಾಲಯಗಳು, ಸಚಿವಾಲಯಗಳಿಂದ ಶಿಾರಸು ಮಾಡಲಾದ ಪ್ರಸ್ತಾವನೆಗಳಿಗೆ ವಿನಾಯ್ತಿ ನೀಡಲಾಗಿದೆ.

ಬಾಕಿಯಿರುವ ಅರ್ಜಿಗಳನ್ನು ವಿವಿಧ ಅನುಮೋದನಾ ಹಂತಗಳಿಗೆ ಅನುಸಾರವಾಗಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಮಂಡಳಿ ಹೇಳಿದೆ.

ಗುಣಮಟ್ಟ ಕುಸಿತ ಕಾರಣ:

- ಸಾಮಾನ್ಯವೆಂಬಂತೆ ನಿರಾಕ್ಷೇಪಣಾ ಪತ್ರಗಳನ್ನು ನೀಡುವ ರಾಜ್ಯ ಸರ್ಕಾರಗಳ ಕ್ರಮಗಳು, ತಪಾಸಣೆ ನಡೆಸದೆ ವಿಶ್ವವಿದ್ಯಾಲಯಗಳು ಸಂಯೋಜನೆ ನೀಡುತ್ತಿರುವುದು

- ಕಾನೂನು ಶಿಕ್ಷಣದ ವಾಣಿಜ್ಯೀಕರಣವನ್ನು ತಡೆಯಲು, ಶೈಕ್ಷಣಿಕ ಅಕ್ರಮಗಳು ವ್ಯಾಪಕವಾಗಿ ನಡೆಯುತ್ತಿರುವುದು

- ಅರ್ಹ ಬೋಧನಾ ಸಿಬ್ಬಂದಿ ಕೊರತೆ