Indian Oil: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆ ಪೆಟ್ರೋಲ್, ಎಲ್‌ಪಿಜಿ ಹಾಗೂ ಇತರ ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಜನಸಾಮಾನ್ಯರು ಮುಂದಾಗಿದ್ದಾರೆ. ಅದರರಲ್ಲೂ ಪಂಜಾಬಿನ ಗಡಿ ಪ್ರದೇಶಗಳಲ್ಲಿ ಪೆಟ್ರೋಲ್ ಬಂಕ್ ಮುಂದೆ ಜನರು ಕ್ಯೂ ನಿಂತಿರುವ ಫೋಟೋ ವೈರಲ್ ಆಗುತ್ತಿದ್ದಂತೆ, ಭಾರತದಲ್ಲಿ ಇಂಧನ ಕೊರತೆ ಇಲ್ಲ, ಎಲ್ಲಾ ಕಡೆ ದೊರಕುತ್ತದೆ ಎಂದು ಶುಕ್ರವಾರ (ಮೇ.9) ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
"ಇಂಡಿಯನ್ ಆಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ದಾಸ್ತಾನುಗಳನ್ನು ಹೊಂದಿದೆ ಮತ್ತು ನಮ್ಮ ಪೂರೈಕೆ ಮಾರ್ಗಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ. ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ - ಇಂಧನ ಮತ್ತು ಎಲ್‌ಪಿಜಿ ನಮ್ಮ ಎಲ್ಲಾ ಮಳಿಗೆಗಳಲ್ಲಿ ಸುಲಭವಾಗಿ ಲಭ್ಯವಿದೆ" ಎಂದು ಕಂಪನಿಯು X ನಲ್ಲಿ ತಿಳಿಸದೆ.
ಜನರು ಶಾಂತವಾಗಿರಲು ಮತ್ತು ಅನಗತ್ಯ ಆತುರವನ್ನು ತಪ್ಪಿಸಲು ಇದು ಸಲಹೆ ನೀಡಿದೆ, ಕಂಪನಿಯು ತಮ್ಮ ಪೂರೈಕೆ ಮಾರ್ಗಗಳನ್ನು ಸರಾಗವಾಗಿ ಚಾಲನೆಯಲ್ಲಿಡಲು ಮತ್ತು ಎಲ್ಲರಿಗೂ ಅಡೆತಡೆಯಿಲ್ಲದ ಇಂಧನ
ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ ಒಂಬತ್ತು ಸ್ಥಳಗಳಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ಕ್ಷಿಪಣಿ ದಾಳಿ ನಡೆಸಿದ ' ಆಪರೇಷನ್ ಸಿಂಧೂರ ' ನಂತರ ಉದ್ವಿಗ್ನತೆ ಹೆಚ್ಚಾದಾಗ, ಇಂಧನವನ್ನು ಸಂಗ್ರಹಿಸಲು ಜನರು ಪೆಟ್ರೋಲ್ ಪಂಪ್‌ಗಳ ಹೊರಗೆ ಸರತಿ ಸಾಲಿನಲ್ಲಿ ನಿಂತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆ ಜನರಿಗೆ ಈ ಕುರಿತು ಸ್ಟಷ್ಟನೆ ನೀಡಿದೆ. (ಏಜೆನ್ಸೀಸ್)