ನ್ಯೂಸ್

ಇನ್ಮುಂದೆ ನಾಯಿ ಇದೆ ಎಚ್ಚರಿಕೆ ಬೋರ್ಡ್​ ಅಗತ್ಯವಿಲ್ಲ... ಬರಲಿದೆ ಆ್ಯಪಲ್ ಫೇಸ್​​ ಡೋರ್​ ಲಾಕರ್! ​| Apple

ಮುಂಬೈ: ತನ್ನ ಪ್ರಿಮೀಯಂ ಪೋನ್​​, ಐಪ್ಯಾಡ್​ ಮತ್ತು ಇತರ ಅತ್ಯಾಧುನಿ ಉತ್ಪನ್ನಗಳಿಗೆ ಹೆಸರುವಾಸಿಯಾದ ಆ್ಯಪಲ್​(Apple) ಕಂಪನಿ ಇದೀಗ ಸ್ಮಾರ್ಟ್​ ಹೋಮ್​​ಗಳ ತಂತ್ರಜ್ಞಾನದ ಬಳಕೆಯಲ್ಲಿ ಹೊಸ ವಿಧಾನವೊಂದು ಸೃಷ್ಟಿಸುವ ಮೂಲಕ ಮಾರುಕಟ್ಟೆಯಲ್ಲಿ ದಾಪುಗಾಲಿಟ್ಟಿದೆ ಎಂದು ವರದಿಯಾಗಿದೆ.

ಹೌದು, ಪ್ರತಿ ಬಾರಿ ಆ್ಯಪಲ್​ ಕಂಪನಿ ತಮ್ಮ ಪೋನ್​ಗಳ ಹೊಸ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನ ಬಳಸುವ ಮೂಲಕ ಗ್ರಾಹಕರನ್ನು ವಿಸ್ಮಯಗೊಳಿಸುತ್ತಿದೆ. ಆದರೆ, ಇದೀಗ ಮನೆಗಳನ್ನು ಸ್ಮಾರ್ಟ್​ ಮಾಡಲು ಮನೆಗಳ ಬಾಗಿಲುಗಳಿಗೆ ಸಂಪ್ರಾದಾಯಕ ಕೀಗಳ ಬದಲಾಗಿ ತಂತ್ರಜ್ಞಾನ ಬಳಸಿಕೊಂಡು ಹೊಸ ವಿಧದ ಕೀ ಬಳಸಲು ಮುಂದಾಗಿದೆ.

2025ಕ್ಕೆ ಬರಲಿದೆ ಆ್ಯಪಲ್ ಫೇಸ್​​ ಡೋರ್​ ಲಾಕರ್​! ​​

2025ರ ವೇಳೆಗೆ ಕಂಪನಿಯೂ ತನ್ನ ಸುಧಾರಿತ ಮತ್ತು ಸುರಕ್ಷಿತ ಫೇಸ್​ ಐಡಿ ತಂತ್ರಜ್ಞಾನ ಒಳಗೊಂಡಿರುವ ಅದ್ಭುತವಾದ ಸ್ಮಾರ್ಟ್​ ಡೋರ್​ ಲಾಕರ್(ಕ್ಯಾಮರಾ)ವನ್ನು ಆಳವಡಿಸುವ ನಿರೀಕ್ಷೆ ಇದೆ. ಈ ಬೆಳವಣಿಗೆ ಮನೆಯ ಭದ್ರತೆಯ ಬಗ್ಗೆ ಮರು ವ್ಯಾಖ್ಯಾನಿಸಲಾಗಿದೆ. ಶೀಘ್ರದಲ್ಲಿಯೇ ಮನೆಯ ಪ್ರವೇಶ ದ್ವಾರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಲಾಗುತ್ತಿದೆ. ಆ್ಯಪಲ್​ ಲಾಂಚ್​ ಮಾಡುವ ಫೇಸ್​ ಡೋರ್​ ಲಾಕರ್,​ ಮನೆಯ ಮಾಲೀಕರನ್ನು ಗುರುತಿಸಿ ಒಳಗೆ ಬೀಡುತ್ತದೆ. ಅಲ್ಲದೆ, ಇದು ಮನೆಯ ಭದ್ರತಾದೃಷ್ಠಿಯಿಂದ ಉತ್ತಮ ಉಪಯೋಗ ಎಂದು ಹಲವರ ಅಭಿಪ್ರಾಯವಾಗಿದೆ.

ಡೋರ್​ ಲಾಕರ್​ ಕೆಲಸ ನಿರ್ವಹಿಸುವುದು ಹೇಗೆ?

ಇನ್ನು ಆ್ಯಪಲ್ ಫೇಸ್​​ ಡೋರ್​ ಲಾಕರ್​ಗಳಲ್ಲಿ ಅತ್ಯಾಧುನಿ ತಂತ್ರಜ್ಞಾನ ಬಳಕೆಯಿಂದಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತವೆ. ಮನೆಯ ಪ್ರವೇಶದ್ವಾರದಲ್ಲಿ ಆಳವಡಿಸಿಕೊಳ್ಳುವ ಫೇಸ್​ ಲಾಕರ್​, ಮನೆ ಮಂದಿಯನ್ನು ಬಿಟ್ಟು ಮನೆಯೊಳಗೆ ಹೋಗಲು ಯಾರಿಗೂ ಪ್ರವೇಶ ನೀಡುವುದಿಲ್ಲ. ಅಲ್ಲದೆ, ಬೇರೆಯವರೂ ಮನೆಯೊಳಗೆ ಬರಬೇಕಾದರೆ ಮನೆಯ ಮಾಲೀಕರ ಅಗತ್ಯವಿದೆ. ಮನೆಯ ಮಾಲೀಕರು ಲಾಕರ್​ನಲ್ಲಿ ಕೆಲ ಬದಲಾವಣೆ ಮಾಡುವ ಮೂಲಕ ಬೇರೆಯವರನ್ನು ಒಳಗೆ ಕರೆದುಕೊಳ್ಳಬಹುದು. ಇಲ್ಲವಾದರೆ ಬೇರೆಯವರಿಗೆ ಖಡಖಂಡಿತ ನಿರ್ಬಂಧ ಗ್ಯಾರಂಟಿ ಎಂದು ಸಾಧನದ ತಂತ್ರಜ್ಞಾನದ ಬಗ್ಗೆ ವರದಿಗಳು ಉಲ್ಲೇಖಿಸಿವೆ.

ಆ್ಯಪಲ್​ ಫೇಸ್​ ಲಾಕರ್ ಉಪಯೋಗ​

ಮನೆಗೆ ಫೇಸ್​ ಲಾಕರ್​ ಆಳವಡಿಸುವುದರಿಂದ ಮನೆ ಮಂದಿಯಲ್ಲ ಮನೆಯಿಂದ ನಿಚಿಂತೆಯಿಂದ ಹೊರ ಹೋಗಬಹುದು. ಕಳ್ಳ ಕಾಟ ಇರುವುದಿಲ್ಲ. ಒಂದು ಮನೆಗೆ ಕಳ್ಳರು ನುಗ್ಗಿದರೆ ನಿಮ್ಮ ಸ್ಮಾರ್ಟ್​​ಪೋನ್​ಗೆ ಕಳ್ಳರ ಪೋಟೋ ಸಮೇತ ಮಾಹಿತಿ ಕ್ಷಣದಲ್ಲಿ ಬರುತ್ತದೆ. ಅಲ್ಲದೆ, ಭದ್ರತಾ ಸಿಬ್ಬಂದಿ ನಿಯೋಜಿಸುವ ಅಗತ್ಯ ಇಲ್ಲ. ಇನ್ಮುಂದೆ ಮನೆಮುಂದೆ ನಾಯಿ ಇದೆ ಎಂದು ಎಚ್ಚರಿಕೆಯ  ಬೋರ್ಡ್​ ಹಾಕುವ ಅಗತ್ಯತೆ ಇರುವುದಿಲ್ಲ.

ಆ್ಯಪಲ್​ ತನ್ನ ಹೊಸ ಮಾನದಂಡಗಳ ಮೂಲಕ ಸ್ಮಾರ್ಟ್​ ಹೋಮ್​ ಆಖಾಡಕ್ಕೆ ಇಳಿಯುತ್ತಿದ್ದು, ಮುಂದಿನ ದಿನಗಳಲ್ಲಿ ತನ್ನ ವ್ಯಾಪ್ತಿಯನ್ನು ಸ್ಮಾರ್ಟ್​ ಹೋಮ್​ ಮಾರುಕಟ್ಟೆಯಲ್ಲಿ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ,(ಏಜೆನ್ಸೀಸ್​).