ನ್ಯೂಸ್

ಎಷ್ಟೇ ದುಬಾರಿ ಬೈಕ್ ಇದ್ದರೂ ಹೆಲ್ಮೆಟ್ ಧರಿಸಬೇಕು; ಇಲ್ಲವಾದರೆ ಜೀವಕ್ಕೆ ಅಪಾಯ ತಪ್ಪಿದಲ್ಲ

ಬೆಂಗಳೂರು : ಐಷರಾಮಿ ಬೈಕ್‌ನಲ್ಲಿ ಹೆಲ್ಮೆಟ್ ರಹಿತವಾಗಿ ಅತೀ ವೇಗವಾಗಿ ಬಂದ ಸವಾರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ.

ಜಾರ್ಖಾಂಡ್ ಮೂಲದ ಆದಿತ್ಯ ಲೂಕ್ ಕುಜುರ್(27) ಮೃತ ಸವಾರ. ಬಿ4 ಸೆಕ್ಯೂರಿಟಿ ಏಜೆನ್ಸಿಯಲ್ಲಿ ಇನ್‌ಚಾರ್ಜ್ ಅಧಿಕಾರಿಯಾಗಿದ್ದ ಆದಿತ್ಯ, ನಗರದ ಚಿನ್ನಯ್ಯಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಮಂಗಳವಾರ ತಡರಾತ್ರಿ 1.30ರಲ್ಲಿ ಇಂದಿರಾನಗರ 100 ಅಡಿ ರಸ್ತೆ 12ನೇ ಮುಖ್ಯರಸ್ತೆಯಲ್ಲಿ ಮಂಗೋಲಿಯಾ ಬೇಕರಿ ಕಡೆಗೆ ಆದಿತ್ಯ, ಬಿಎಂಡಬ್ಲೂೃ ಬೈಕ್‌ನಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ.

ಸವಾರನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೈಕ್ ಬಿದ್ದಾಗ ಸವಾರನ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ದಾರಿಹೋಕರು ಗಾಯಾಳು ಸವಾರರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆ ಲಿಸದೆ ಆದಿತ್ಯ, ಅಸುನೀಗಿದ್ದಾನೆ. ವಿಷಯ ತಿಳಿದ ಜೆ.ಬಿ.ನಗರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.