ನ್ಯೂಸ್

VIDEO | ಹೆಲ್ಮೆಟ್​ ಇಲ್ಲ, ಹ್ಯಾಂಡಲ್​ ಮೇಲೂ ಕೈ ಇಲ್ಲ..ಬುಲೆಟ್​ ಬೈಕ್​ನಲ್ಲಿ ಕಾಂಗ್ರೆಸ್​ ನಾಯಕ!

ನವದೆಹಲಿ: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೆಲ್ಮೆಟ್ ಧರಿಸಿದೆ ಹ್ಯಾಂಡಲ್ ಮೇಲೆ ಕೈ ಕೂಡ ಇಡದೆ ಬೈಕ್​​​ನಲ್ಲಿ ಸ್ಟಂಟ್​ ಮಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಚೌಧರಿ ಅವರು ಪಶ್ಚಿಮ ಬಂಗಾಳದ ತಮ್ಮ ವಿಧಾನಸಭಾ ಕ್ಷೇತ್ರವಾದ ಬಹರಂಪುರದಲ್ಲಿ ಬೈಕ್ ಜಾಥಾ ನಡೆಸಿದರು. ಆ ಸಮಯದಲ್ಲಿ ಹೆಲ್ಮೆಟ್​ ಧರಿಸಿರಲಿಲ್ಲ, ಹಲವು ಬಾರಿ ಬೈಕ್​ನ ಹ್ಯಾಂಡಲ್​ ಬಿಟ್ಟು ಗಾಡಿ ಓಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ, ರಂಜನ್ ಚೌಧರಿ ಸಂಚಾರಿ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.

ವಿಡಿಯೋದಲ್ಲಿ ಏನಿದೆ?: ಅಧೀರ್ ಜತೆಗಿದ್ದ ಬೆರಳೆಣಿಕೆಯಷ್ಟು ಸವಾರರು ಮಾತ್ರ ಹೆಲ್ಮೆಟ್ ಧರಿಸಿದ್ದರೆ, ಅಧೀರ್ ಟೋಪಿ ಧರಿಸಿದ್ದರು. ಅಧೀರ್ ತನ್ನ ರಾಯಲ್ ಎನ್‌ಫೀಲ್ಡ್‌ನಲ್ಲಿ ಸುಮಾರು 11 ಕಿ.ಮೀ ಸವಾರಿ ಮಾಡಿದ್ದಾರೆ, ರಸ್ತೆ ಬದಿಯಲ್ಲಿ ಹೋಗುತ್ತಿದ್ದವರಿಗೆ ಕೈ ಬೀಸುತ್ತಿದ್ದರು.

ಪೊಲೀಸರು ದಂಡ ವಿಧಿಸಿದರೆ ಯಾವುದೇ ತೊಂದರೆ ಇಲ್ಲ. ಆದರೆ ನಾನು ಬೈಕ್ ಚಲಾಯಿಸುತ್ತಿದ್ದ ಸ್ಥಳದಲ್ಲಿ ಯಾರೂ ಇರಲಿಲ್ಲ. ನಾನು ಬೈಕ್ ಓಡಿಸುತ್ತಿದ್ದ ಜಾಗಕ್ಕೂ, ಬಹಳ ದಿನಗಳ ನಂತರ ಬೈಕ್ ಓಡಿಸುತ್ತಿದ್ದ ಜಾಗಕ್ಕೂ ನನ್ನ ನೆನಪುಗಳು ತಳಕು ಹಾಕಿಕೊಂಡಿವೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.