ಅಹಮದಬಾದ್: ಕರ್ನಾಟಕದಲ್ಲಿ ನಂದಿನಿ ಬ್ರ್ಯಾಂಟ್ ಜೊತೆ ಸ್ಪರ್ಧಿಸುವ ಮಾತೇ ಇಲ್ಲ ಎಂದು ಹೇಳುವ ಮೂಲಕ ಅಮುಲ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ(MD) ಜಯನ್ ಮೆಹ್ತಾ ಹೇಳಿದ್ದಾರೆ.
ಎರಡು ಬ್ರ್ಯಾಂಡ್ಗಳ ಒಕ್ಕೂಟವೂ ರೈತರದ್ದೇ ಆಗಿದೆ. ಎರಡು ಬ್ರ್ಯಾಂಡ್ಗಳ ನಡುವೆ ಸ್ಪರ್ದೆಯ ಮಾತಿಲ್ಲ ಎಂದು ನಂದಿನಿ vs ಅಮುಲ್ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಅಮೂಲ್ ಕಂಪನಿಯ ಉತ್ಪನ್ನಗಳು ಪೂರ್ಣಪ್ರಮಾಣದಲ್ಲಿ ಕರ್ನಾಟಕದ ಮಾರುಕಟ್ಟೆಯನ್ನು ಪ್ರವೇಶಿಸುವುದಿಲ್ಲ. ಆನ್ಲೈನ್ ಮೂಲಕ ನಾವು ಹಾಲು ಮತ್ತು ಮೊಸರನ್ನು ಮಾರಾಟ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಕಳೆದ 25 ವರ್ಷಗಳಿಂದ KMFಗೆ ಸೇರಿದ್ದ ಮೂರು ಘಟಕಗಳಲ್ಲಿ ನಾವು ಐಸ್ಕ್ರೀಂ ತಯಾರಿಸುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ನಾವು KMFನಿಂದ 5 ಟನ್ ಚೀಸ್ ಖರೀದಿಸಿದ್ದೇವೆ. 2015-16ರಿಂದಲೇ ಉತ್ತರ ಕರ್ನಾಟಕ ಎರಡು ಜಿಲ್ಲೆಗಳಲ್ಲಿ ಅಮೂಲ್ ಹಾಲುಗಳ ಮಾರಾಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ನಂದಿನಿ ಹಾಲಿಗೆ ಸರ್ಕಾರದ ವತಿಯಿಂದ ಸಬ್ಸಿಡಿ ನೀಡುವ ಕಾರಣ ಅದರ ಹಾಲು ಹಾಗೂ ಮೊಸರಿನ ದರವು ಅಗ್ಗವಾಗಿದೆ. ಅಮೂಲ್ ಹಾಲಿನ ದರವು ಲೀಟರಿಗೆ 54 ರೂಪಾಯಿ ಇದ್ದರೆ ನಂದಿನಿ ಹಾಲಿನ ದರವು ಲೀಟರಿಗೆ 39 ರೂಪಾಯಿ ಇದೆ. ಈ ಕಾರಣಕ್ಕಾಗಿಯೇ ಉಭಯ ಬ್ರ್ಯಾಂಡ್ಗಳ ನಡುವೆ ಸ್ಪರ್ಧೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅಮೂಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಯನ್ ನೆಹ್ತಾ ತಿಳಿಸಿದ್ದಾರೆ.