ನ್ಯೂಸ್

ಕುಂಕುಮ ಇಲ್ಲದೇ ಪ್ರವೇಶ ಇಲ್ಲ- ಹೊಸಪೇಟೆಯ ಈ ದೇವಸ್ಥಾನದ ಒಳಗೆ ಹೊಸ ಚರ್ಚೆ..!

ವಿಜಯನಗರ: ಹೊಸಪೇಟೆ ಜಗದಂಬಾ ದೇವಸ್ಥಾನದಲ್ಲಿ ಕುಂಕುಮವಿಲ್ಲದೆ ಪ್ರವೇಶವಿಲ್ಲ ಎಂದು ಬೋರ್ಡ್​​​ ಹಾಕಿ ಕ್ಯಾಂಪೇನ್​ ಮಾಡಲಾಗುತ್ತಿದೆ. ಹೊಸಪೇಟೆ ನಗರದ ಬಳ್ಳಾರಿ‌ ರಸ್ತೆಯಲ್ಲಿರೋ ಎಸ್.ಎಸ್.ಕೆ‌ ಸಮಾಜದ ಜಗದಂಬಾ ದೇವಸ್ಥಾನದ ಆವರಣದ ಮುಂದೆ ಕುಂಕುಮ ಇಲ್ಲದೇ ಪ್ರವೇಶ ಇಲ್ಲ ಎಂದು ಬೋರ್ಡ್​​​ ಹಾಕಲಾಗಿದೆ.

ಹಿಂದೂ ಧರ್ಮದ ಜಾಗೃತಿಗಾಗಿ ದೇವಾಲಯದ ಟ್ರಸ್ಟ್​ ಕ್ಯಾಂಪೇನ್ ಆರಂಭಿಸಿದೆ. ಕುಂಕುಮ ಹಚ್ಚಿಕೊಳ್ಳದೇ ದೇವಸ್ಥಾನಕ್ಕೆ ಪ್ರವೇಶ ಕೊಡ್ತಿಲ್ಲ. ದೇವಸ್ಥಾನದ ಪ್ರವೇಶ ದ್ವಾರದ ಎಡ ಮತ್ತು ಬಲ ಭಾಗದಲ್ಲಿ ನಾಮಫಲಕ ಅಳವಡಿಸಿ ಕ್ಯಾಂಪೇನ್ ಮಾಡಲಾಗುತ್ತಿದೆ.

ನಮ್ಮ ಹಿಂದೂ‌ ಧರ್ಮದ ಸಂಕೇತವೇ ತಿಲಕ, ನಮ್ಮ ಮುಂದಿನ ಪೀಳಿಗೆ ಯುವಕರಿಗೆ ಜಾಗೃತಿಗಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಟ್ರಸ್ಟ್ ಹೇಳಿದೆ. ಇದು ಚರ್ಚೆಗೂ ಕಾರಣವಾಗಿದೆ. ಸೋಮವಂಶ ಕ್ಷತ್ರೀಯ ಸಮಾಜದಿಂದ ಹಿಂದೂ‌ ಧರ್ಮದ ಕುರಿತು ಜಾಗೃತಿ ಮೂಡಿಸುತ್ತಿದೆ.