ನವದೆಹಲಿ: ಕರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಒಂದೆಡೆ ಕರೊನಾ ವೈರಸ್ನಿಂದ ಹಲವರು ಸಾಯುತ್ತಿದ್ದರೆ, ಮತ್ತೊಂದೆಡೆ ರೋಗಿಗಳಿಗೆ ಚಿಕಿತ್ಸೆ ನೀಡಿ, ಅದೇ ಸೋಂಕಿನಿಂದ ಕೆಲವು ವೈದ್ಯರೂ ಮೃತಪಟ್ಟಿದ್ದಾರೆ.
ನವದೆಹಲಿ: ಕರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಒಂದೆಡೆ ಕರೊನಾ ವೈರಸ್ನಿಂದ ಹಲವರು ಸಾಯುತ್ತಿದ್ದರೆ, ಮತ್ತೊಂದೆಡೆ ರೋಗಿಗಳಿಗೆ ಚಿಕಿತ್ಸೆ ನೀಡಿ, ಅದೇ ಸೋಂಕಿನಿಂದ ಕೆಲವು ವೈದ್ಯರೂ ಮೃತಪಟ್ಟಿದ್ದಾರೆ.
ಹಾಗೇ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಓರ್ವ ವೈದ್ಯನ ಫೋಟೋ ವೈರಲ್ ಆಗಿತ್ತು. ಕುತ್ತಿಗೆಗೆ ಸ್ಟೆತೋಸ್ಕೋಪ್ ಹಾಕಿಕೊಂಡು, ಬಿಳಿ ಕೋಟ್ ಧರಿಸಿ ನಿಂತಿದ್ದ ವೈದ್ಯನ ಫೋಟೋ ವೈರಲ್ ಆಗುವ ಜತೆ, ಇವರ ಹೆಸರು, ಉಸ್ಮಾನ್ ರಿಯಾಜ್. ದೆಹಲಿಯ ಆಸ್ಪತ್ರೆಯೊಂದರಲ್ಲಿ ವೈದ್ಯರು. ಹಲವು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರ ಪ್ರಾಣ ಉಳಿಸಿದ್ದಾರೆ. ಆದರೆ ಬಳಿಕ ವೈದ್ಯರಿಗೇ ಕರೊನಾ ವೈರಸ್ ತಗುಲಿ ಮೃತಪಟ್ಟಿದ್ದಾರೆ ಎಂದು ಫೋಟೋದೊಂದಿಗೆ ವಿವರಣೆ ನೀಡಲಾಗಿತ್ತು.
ಅಲ್ಲದೆ, ಭಾರತದಲ್ಲಿ ಕರೊನಾಕ್ಕೆ ಬಲಿಯಾದ ಮೊದಲ ವೈದ್ಯ ಎಂದೂ ಹೇಳಲಾಗಿತ್ತು. ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಸತ್ಯ ಬಯಲಾಗಿದೆ.
ಡಾ. ರಿಯಾಜ್ ಉಸ್ಮಾನ್ ಸತ್ತೇ ಇಲ್ಲ. ಸದ್ಯ ಯುಎಇಯ ಆಸ್ಟರ್ ಎಂಬ ಕ್ಲಿನಿಕ್ನಲ್ಲಿ ಜನರಲ್ ಪ್ರಾಕ್ಟೀಷನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಸ್ಟರ್ ಕ್ಲಿನಿಕ್ನಲ್ಲಿ ಈ ವೈದ್ಯ ಕೆಲಸ ಮಾಡುತ್ತಿರುವ ಬಗ್ಗೆ ಅದರ ವೆಬ್ಸೈಟ್ನಲ್ಲಿ ದಾಖಲೆಯಿದೆ. ರಿಯಾಜ್ ಪ್ರೊಫೈಲ್, ಫೋಟೋಗಳೂ ಇವೆ.
ಅಷ್ಟೇ ಅಲ್ಲದೆ, ದೆಹಲಿಯಲ್ಲಿ ಯಾವ ವೈದ್ಯನೂ ಕರೊನಾ ವೈರಸ್ನಿಂದ ಮೃತಪಟ್ಟ ಅಧಿಕೃತ ವರದಿಯೂ ಇಲ್ಲ. ಯಾವುದೇ ಆಸ್ಪತ್ರೆಗಳಲ್ಲೂ ಇದು ದಾಖಲಾಗಿಲ್ಲ.
ಸದ್ಯ ವೈರಲ್ ಆಗುತ್ತಿರುವ ದುಬೈ ವೈದ್ಯ ಡಾ. ರಿಯಾಜ್ ಉಸ್ಮಾನ್ ಜೀವಂತವಾಗಿದ್ದಾರೆ. ಹಾಗೇ ಪಾಕಿಸ್ತಾನದಲ್ಲಿ ಇದೇ ಹೆಸರಿನ ಓರ್ವ ವೈದ್ಯ ಕರೊನಾ ವೈರಸ್ನಿಂದ ಮೃತಪಟ್ಟಿದ್ದು ದೃಢಪಟ್ಟಿದೆ.
ಪಾಕ್ ವೈದ್ಯ ಡಾ. ರಿಯಾಜ್ ಯಾತ್ರೆಗೆ ತೆರಳಿದ್ದರು. ಇರಾನ್ನಿಂದ ಪಾಕ್ಗೆ ಬಂದಾಗ ತೀವ್ರ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು. ತಪಾಸಣೆಯಲ್ಲಿ ಕರೊನಾ ಇರುವುದು ದೃಢಪಟ್ಟಿತ್ತು. ಅದೇ ಸೋಂಕಿಗೆ ಬಲಿಯಾಗಿದ್ದಾರೆ.(ಏಜೆನ್ಸೀಸ್)