ನ್ಯೂಸ್

'ಇಂಡಿಯಾ' ಮೈತ್ರಿಕೂಟ ಸೇರಿದ್ರೆ ನಷ್ಟವೇ ಹೆಚ್ಚು: ಹೀಗಂದಿದ್ದೇಕೆ ಮಾಯಾವತಿ?

ಲಖನೌ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮೈತ್ರಿ ಕುರಿತು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ. ತಮ್ಮ ಪಕ್ಷ ಇಂಡಿಯಾ ಮೈತ್ರಿಕೂಟಕ್ಕೆ ಸೇರುವುದಿಲ್ಲ. ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದು ಬಿಎಸ್‌ಪಿಗೆ ಅನಾನುಕೂಲವಾಗಿದೆ. ಮೇಲ್ವರ್ಗದ ಮತಗಳು ಬಿಎಸ್ಪಿಗೆ ವರ್ಗಾವಣೆಯಾಗುವುದಿಲ್ಲ. ದಲಿತ ಮತಗಳು ವರ್ಗಾವಣೆಯಾಗುತ್ತವೆ ಎಂದರು.

ಇಂಡಿಯಾ ಮೈತ್ರಿಕೂಟಕ್ಕೆ ಸೇರಿದರೆ ಲಾಭ ಕಡಿಮೆ ನಷ್ಟವೇ ಹೆಚ್ಚು. ನಮ್ಮ ಮತಗಳ ಶೇಕಡಾವಾರು ಪ್ರಮಾಣ ಕಡಿಮೆಯಾಗಿ ಇತರೆ ಪಕ್ಷಗಳಿಗೆ ಲಾಭವಾಗುತ್ತದೆ. ನಮ್ಮ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಮೂಲಕ ಉತ್ತಮ ಫಲಿತಾಂಶ ತರಲಿದೆ. ಮೈತ್ರಿ ಮಾಡಿಕೊಂಡರೆ ಬಿಎಸ್​ಪಿಯ ಸಂಪೂರ್ಣ ಮತವು ಮೈತ್ರಿ ಪಕ್ಷಕ್ಕೆ ಹೋಗುತ್ತದೆ ಎಂದಿದ್ದಾರೆ. ಚುನಾವಣೆ ಮುಗಿದ ಬಳಿಕ ಮೈತ್ರಿ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಮಾಯಾವತಿ ಹೇಳಿದ್ದಾರೆ.

ಮಾಯಾವತಿ ಅವರು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿ ಗೋಸುಂಬೆ ಎಂದು ಕರೆದಿದ್ದಾರೆ. ಮೈತ್ರಿ ಮಾಡಿಕೊಳ್ಳದೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವು ದಿಟ್ಟ ಹೆಜ್ಜೆ ಎಂದೇ ಹೇಳಬಹುದು.