ನ್ಯೂಸ್

ವಿಮಾನದಲ್ಲಿ ಎಸಿ ಆನ್​ ಮಾಡಲಿಲ್ಲ, ಬೆವರು ಒರೆಸಿಕೊಳ್ಳಲು ಟಿಶ್ಯೂ ಕೊಟ್ಟಿದ್ರು: ಇಂಡಿಗೋ ಪ್ಲೈಟ್​​ನ ಕಹಿ ಅನುಭವ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ

ನವದೆಹಲಿ: ಪಂಜಾಬ್​ನ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ಚಂಡೀಗಢದಿಂದ ಜೈಪುರಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ವಿಮಾನದಲ್ಲಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಚಂಡೀಗಢದಿಂದ ಜೈಪುರಕ್ಕೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ವಿಮಾನದಲ್ಲಿ ಎಸಿ ಇರಲಿಲ್ಲ, ವಿಮಾನ ಸಿಬ್ಬಂದಿ ಬೆವರು ಒರೆಸಿಕೊಳ್ಳಲು ಪ್ರಯಾಣಿಕರಿಗೆ ಟಿಶ್ಯೂ ನೀಡಿದ್ದರು. 90 ನಿಮಿಷಗಳ ಪ್ರಯಾಣ ಅತ್ಯಂತ ಭಯಾನಕವಾಗಿತ್ತು ಎಂದು ಅಮರಿಂದರ್ ಸಿಂಗ್ ಟ್ವೀಟ್​​ ಮಾಡಿದ್ದಾರೆ.

ಈ ಬಗ್ಗೆ ದೂರಿದ ಕಾಂಗ್ರೆಸ್ ಮುಖಂಡರು, ಮೊದಲು ಪ್ರಯಾಣಿಕರನ್ನು ಬಿಸಿಲಿನ ತಾಪದಲ್ಲಿ ಸುಮಾರು 10-15 ನಿಮಿಷಗಳ ಕಾಲ ಸರದಿಯಲ್ಲಿ ಕಾಯುವಂತೆ ಮಾಡಲಾಯಿತು ಮತ್ತು ನಂತರ ಎಸಿಗಳು ಆನ್ ಮಾಡದೆಯೇ ವಿಮಾನ ಟೇಕ್ ಆಫ್ ಆಯಿತು ಎಂದು ಹೇಳಿದರು. ಟೇಕ್‌ಆಫ್‌ನಿಂದ ಲ್ಯಾಂಡಿಂಗ್‌ವರೆಗೆ, AC ಗಳು ಆಫ್ ಆಗಿದ್ದವು ಮತ್ತು ಎಲ್ಲಾ ಪ್ರಯಾಣಿಕರು ಕಷ್ಟ ಪಡುವಂತಾಗಿತ್ತು.