ಪಾರ್ವತಮ್ಮನವರು ಡಾ. ರಾಜ್ಕುಮಾರ್ಗಾಗಿ ಉತ್ತಮ ಕಥೆಗಳನ್ನ ಹುಡುಕೋದ್ರಲ್ಲೇ ಸದಾ ನಿರತರಾಗಿದ್ದವರು. ಜತೆಗೆ ನಿನ್ನೆ (ಡಿ.6) ರಂದು ಚಿತ್ರ ನಿರ್ಮಾಣದ ಮೂಲಭೂತ ತತ್ವಗಳನ್ನು ಅರಿತ ನಂತರ ತಾವೇ ಒಂದು ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸಿ ಡಾ. ರಾಜ್‌ಗಾಗಿ ಚಿತ್ರ ನಿರ್ಮಿಸಲು ಆಲೋಚಿಸಿದರು.
ಡಾ. ರಾಜ್‌ಕುಮಾರ್ ಅವರ ಹಿಂದಿನ ಬಹುದೊಡ್ಡ ಶಕ್ತಿಯಾಗಿ, 'ಪೂರ್ಣಿಮಾ ಎಂಟರ್ ಪ್ರೈಸಸ್' ಮತ್ತು 'ವಜ್ರೇಶ್ವರಿ ಕಂಬೈನ್ಸ್' ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹಲವಾರು ಕನ್ನಡದ ಹಿಟ್ ಚಿತ್ರಗಳನ್ನು ನೀಡುವುದರ ಜೊತೆಗೆ ಅನೇಕ ನಟ ಮತ್ತು ನಟಿ ಮಣಿಯರನ್ನು ಪರಿಯಚಿಸಿದ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮ ದಿನದಂದು ಅವರ ಸಮಾಧಿಯ ಬಳಿ ಅನೇಕಬ ನಟ ನಟಿಯರು ತೆರಳಿ ಪೂಜೆ ಪುನಸ್ಕಾರ ಮಾಡಿದ್ದಾರೆ.
ಇದೀಗ ಶಿವರಾಜ್ಕುಮಾರ್ ಮಗಳಾದ ನಿವೇದಿತಾ ಶಿವರಾಜ್ಕುಮಾರ್ ತಮ್ಮ ಅಜ್ಜಿ ಪಾರ್ವತಮ್ಮನವರನ್ನ ನೆನೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನ ಹಾಕಿದ್ದಾರೆ. ''ಅಜ್ಜಿ, ನಿಮ್ಮ ಪ್ರೀತಿ ಮತ್ತು ಶಕ್ತಿ ಇನ್ನೂ ನಮ್ಮ ಜೀವನವನ್ನು ಬೆಳಗಿಸುತ್ತದೆ ಮತ್ತು ಪ್ರತಿದಿನವನ್ನ ಪ್ರಕಾಶಮಾನವನ್ನಾಗಿಸುತ್ತೆ ನೀವು ನಮ್ಮ ಹೃದಯದಲ್ಲಿದ್ದೀರಿ ಮತ್ತು ನಮ್ಮ ಜೀವನದ ಬೇರು. ನಿಮ್ಮ ಜನ್ಮ ವಾರ್ಷಿಕೋತ್ಸವದಂದು ನಿಮ್ಮಂತಹ ವ್ಯಕ್ತಿ ನೀಡಿದ ಪ್ರೀತಿಯನ್ನ ಆಚರಿಸುತ್ತಿರೋದು ನಮ್ಮ ಪುಣ್ಯ ಎಂದು ಬರೆದಿದ್ದಾರೆ.
ಪಾರ್ವತಮ್ಮನವರ ಬ್ಯಾನರ್‌ನಲ್ಲಿ ಮೂಡಿಬಂದ ಮೊದಲ ಚಿತ್ರ 'ತ್ರಿಮೂರ್ತಿ', ನಂತರ 'ಸನಾದಿ ಅಪ್ಪಣ್ಣ', 'ಶಂಕರ ಗುರು', 'ತಾಯಿಗೆ ತಕ್ಕ ಮಗ' ಹೀಗೆ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಜತೆಗೆ ಪಾರ್ವತಮ್ಮನವರ ಪ್ರತಿಯೊಂದು ಚಲನಚಿತ್ರಗಳನ್ನ ಮಾಡುವ ಮುನ್ನ ಈ ಚಿತ್ರ ಮಾಡಬೇಕೋ ಬೇಡವೋ ಎಂದು ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತಹ ವ್ಯಜ್ತಿ.
ಉತ್ತಮ ಸಾಹಿತ್ಯವೇ ಚಿತ್ರದ ಆತ್ಮವೆಂದು ನಂಬಿದ್ದ ಪಾರ್ವತಮ್ಮನವರು ತಮ್ಮ ಬ್ಯಾನರ್ ಮೂಲಕ ಹಲವಾರು ಲೇಖಕರಿಗೆ ಆಶ್ರಯವಾದರು.