Nitya Bhavishya 
ನ್ಯೂಸ್

ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಪಿತ್ರಾರ್ಜಿತ ಆಸ್ತಿ ಅನಿರೀಕ್ಷಿತವಾಗಿ ಸಿಗಲಿದೆ

ಮೇಷ: ಹೊಸ ಉದ್ಯೋಗದಲ್ಲಿ ಸಮಾಧಾನಕರ ವಾತಾವರಣ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸ್ವಲ್ಪಮಟ್ಟಿನ ಪ್ರಗತಿ. ಸರ್ಕಾರಿ ಉದ್ಯೋಗಕ್ಕೆ ಆಯ್ಕೆ. ಶುಭಸಂಖ್ಯೆ: 9.
ವೃಷಭ: ಬ್ಯಾಂಕ್‌ ಉದ್ಯೋಗಿಗಳಿಗೆ ವರ್ಗಾವಣೆ. ಮಾತಿನ ಚಾಕಚಕ್ಯತೆಯಿಂದ ಕೆಲಸ ಸಾಧಿಸಿಕೊಳ್ಳುವಿರಿ. ದುರ್ಬಲರಿಗೆ ದಾನಮಾಡುವ ಅವಕಾಶ. ಶುಭಸಂಖ್ಯೆ: 1.
ಮಿಥುನ: ಆಸ್ತಿ ವಿಚಾರದಲ್ಲಿ ತಾಳ್ಮೆ ವಹಿಸಿ. ಮಗನಿಗೆ ಉತ್ತಮ ಸಂಬಂಧ ಕೂಡಿ ಬರಲಿದೆ. ಪಾಲುದಾರಿಕೆಯಲ್ಲಿ ಹೊಸ ಉದ್ಯಮ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ: 5.
ಕಟಕ: ಎನ್‌ಜಿಓ ನಡೆಸುವವರಿಗೆ ಆರ್ಥಿಕ ಸಹಾಯ ಸಿಗಲಿದೆ. ಉದ್ಯೋಗದಲ್ಲಿದ್ದ ಆತಂಕ ನಿವಾರಣೆ. ಹೂವು ಹಣ್ಣು ತರಕಾರಿ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 6.
ಸಿಂಹ: ನಿಮ್ಮ ಸಾಧನೆಗೆ ಸಾರ್ವಜನಿಕವಾಗಿ ಪ್ರಶಂಸೆ. ಧಾರ್ಮಿಕ ಗುರುಗಳ ಭೇಟಿ. ಹಿತಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 2.
ಕನ್ಯಾ: ಸಂಸ್ಕರಿಸಿದ ಪಾನೀಯ ಮಾರಾಟದಲ್ಲಿ ಲಾಭ. ವಿವಾಹ ಮಂಗಳ ಕಾರ್ಯಗಳ ಆಯೋಜಕರಿಗೆ ಬೇಡಿಕೆ ಹೆಚ್ಚಲಿದೆ. ಆಹಾರದ ಮಾರಾಟದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 6.
ತುಲಾ: ಕೃಷಿಕರಿಗೆ ಯಂತ್ರೋಪಕರಣಗಳ ನೆರವು ಸಿಗಲಿದೆ. ಸಿಎ ವಿದ್ಯಾರ್ಥಿಗಳಿಗೆ ಯಶಸ್ಸು. ವೈದ್ಯರಿಗೆ ವಿದೇಶ ಪ್ರವಾಸ ಸಾಧ್ಯತೆ. ಶುಭಸಂಖ್ಯೆ: 7.
ವೃಶ್ಚಿಕ: ಸಾರಿಗೆ ಸಂಸ್ಥೆ ನೌಕರರಿಗೆ ಆದಾಯ ಹೆಚ್ಚಲಿದೆ. ಗೃಹ ಬಳಕೆ ಪೀಠೋಪಕರಣಗಳ ಖರೀದಿಗೆ ಹಣ ವ್ಯಯ. ಜಿಮ್‌ ತರಬೇತುದಾರರಿಗೆ ಶುಭದಿನ. ಶುಭಸಂಖ್ಯೆ: 3.
ಧನಸ್ಸು: ಪಿತ್ರಾರ್ಜಿತ ಆಸ್ತಿ ಅನಿರೀಕ್ಷಿತವಾಗಿ ಸಿಗಲಿದೆ. ವಿದೇಶದಲ್ಲಿರುವ ಸ್ನೇಹಿತನಿಂದ ಆರ್ಥಿಕ ಸಹಾಯ. ಬ್ಯಾಂಕ್‌ ಉದ್ಯೋಗಿಗಳಿಗೆ ಪ್ರಮೋಷನ್‌. ಶುಭಸಂಖ್ಯೆ: 3.
ಮಕರ: ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಸಾಧಾರಣ ಪ್ರಗತಿ. ತೆಂಗಿನಕಾಯಿ ಮತ್ತು ಬಾಳೆಹಣ್ಣು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 6.
ಕುಂಭ: ಸ್ನೇಹಿತರೊಂದಿಗೆ ಔತಣಕೂಟ. ಪರಿಸರ ಸಂಬಂಧಿ ಹೋರಾಟದಲ್ಲಿ ಯಶಸ್ವಿಯಾಗುವಿರಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಿಗಲಿದೆ. ಶುಭಸಂಖ್ಯೆ: 4.
ಮೀನ: ಚಲನಚಿತ್ರ, ಧಾರಾವಾಹಿ ಕ್ಷೇತ್ರದಲ್ಲಿ ಅವಕಾಶ. ವಾಣಿಜ್ಯ ಸಂಬಂಧಿತ ಆಸ್ತಿ ವಿವಾದ ಇತ್ಯರ್ಥ. ವೈದ್ಯಕೀಯ ಉಪಕರಣಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 7.