ನ್ಯೂಸ್

ನಿತ್ಯ ಭವಿಷ್ಯ | ಈ ರಾಶಿಯವರಿಗಿಂದು ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಲಾಭ

ಮೇಷ: ಮದುವೆ ಕಾರ್ಯಗಳನ್ನು ಶೀಘ್ರವಾಗಿ ಮಾಡುವಿರಿ. ಗುರು ಹಿರಿಯರಲ್ಲಿ ಭಕ್ತಿ. ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ:5

ವೃಷಭ: ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ. ನೂತನ ಗೃಹ ನಿರ್ಮಾಣ ಕೆಲಸ ಪ್ರಾರಂಭವಾಗುವುದು. ಮಕ್ಕಳಿಂದ ಧನ ಲಾಭ. ಶುಭಸಂಖ್ಯೆ:9

ಮಿಥುನ: ಯಾರಿಗೂ ತಲೆ ಬಾಗುವುದಿಲ್ಲ ಎನ್ನುವುದು ಸರಿಯಲ್ಲ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ. ಆಹಾರ ಧಾನ್ಯ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 8

ಕಟಕ: ಭೂ ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ. ಹಿಡಿದ ಕೆಲಸ ಸಾಧಿಸುವಿರಿ, ನಂಬಿಕಸ್ಥ ಕೆಲಸಗಾರರಿಂದ ಲಾಭ. ಶುಭಸಂಖ್ಯೆ: 7

ಸಿಂಹ: ಹೊಸ ವಿಚಾರಗಳಲ್ಲಿ ಆಸಕ್ತಿ. ಹಿರಿಯರಿಂದ ನಿಮ್ಮ ಕೆಲಸಕ್ಕೆ ಬೆಂಬಲ. ಕೋಪ ನಿಯಂತ್ರಿಸಿಕೊಳ್ಳಿ. ಬಂಧುಗಳೊಂದಿಗೆ ಪ್ರವಾಸ.ಶುಭಸಂಖ್ಯೆ: 7

ಕನ್ಯಾ: ವ್ಯಾಪಾರ ನಿರೀಕ್ಷೆಯಂತೆ ನಡೆಯುವುದು. ಆರೋಗ್ಯ ಸಮಸ್ಯೆಗೆ ಸೂಕ್ತ ಚಿಕಿತ್ಸೆ. ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಗೊಂದಲ. ಶುಭಸಂಖ್ಯೆ:1

ತುಲಾ: ಸ್ವ- ಉದ್ಯೋಗದಲ್ಲಿ ಫಲಿತಾಂಶ ಸಿಗುವುದು. ಮಕ್ಕಳ ಖರ್ಚು ವೆಚ್ಚಗಳತ್ತ ಗಮನಹರಿಸಿ. ಸ್ನೇಹಿತರಿಂದ ಉದ್ಯೋಗದಲ್ಲಿ ಸಹಾಯ. ಶುಭಸಂಖ್ಯೆ: 3

ವೃಶ್ಚಿಕ: ದೃಢ ಮನಸ್ಸಿನಿಂದ ನಿರ್ಧಾರ ತೆಗೆದುಕೊಳ್ಳಿ. ಅಕಾಲ ಭೋಜನ ಮಾಡಬೇಕಾಗುವುದು. ಅನಾರೋಗ್ಯ ಮನೆಯಲ್ಲಿ ಶುಭಕಾರ್ಯ.ಶುಭಸಂಖ್ಯೆ:3

ಧನಸ್ಸು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಲಾಭ. ಯತ್ನ ಕಾರ್ಯಗಳಲ್ಲಿ ಮುನ್ನಡೆ. ಆದಾಯಕ್ಕಿಂತ ಹೆಚ್ಚು ಖರ್ಚು. ಶುಭಸಂಖ್ಯೆ: 3

ಮಕರ: ಸರ್ಕಾರಿ ಕೆಲಸದಲ್ಲಿ ಯಶಸ್ಸು. ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ಸಾಲ ತೀರಿಸಲು ಮಿತ್ರರ ಸಹಾಯ. ಮಂಗಳ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ:5

ಕುಂಭ: ದಾನ ಧರ್ಮದಲ್ಲಿ ವಿಶೇಷ ಆಸಕ್ತಿ ತಾಳುವಿರಿ. ಕುಟುಂಬದಲ್ಲಿ ನೆಮ್ಮದಿ. ಸುಖ ಭೋಜನ. ಕಿರುಚಿತ್ರ ನಟರಿಗೆ ಹೊಸ ಅವಕಾಶ. ಶುಭಸಂಖ್ಯೆ:8

ಮೀನ: ಪ್ರಿಯ ಜನರ ಭೇಟಿ. ದಿನಸಿ ಅಂಗಡಿಗಳಲ್ಲಿ ಲಾಭ. ಮನಸ್ಸಿನಲ್ಲಿ ಭಯಭೀತಿ ನಿವಾರಣೆ. ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 2