ನ್ಯೂಸ್

ನೀತಿ ಆಯೋಗದ ಹಿರಿಯ ಅಧಿಕಾರಿಗೆ ಕರೊನಾ ಸೋಂಕು; 48 ಗಂಟೆಗಳವರೆಗೆ ಆ ಪ್ರದೇಶ ಸಂಪೂರ್ಣ ಬಂದ್​

ನವದೆಹಲಿ: ಇಲ್ಲಿನ ನೀತಿ ಆಯೋಗ (ನ್ಯಾಷನಲ್ ಇನ್ಸ್ಟಿಟ್ಯೂಟಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ) ದ ಕಟ್ಟಡವನ್ನು ಸಂಪೂರ್ಣ ಸೀಲ್​ ಮಾಡಲಾಗಿದೆ. ಇದಕ್ಕೆ ಕಾರಣ ಹಿರಿಯ ಅಧಿಕಾರಿಯೋರ್ವರಲ್ಲಿ ಕಾಣಿಸಿಕೊಂಡ ಕರೊನಾ ವೈರಸ್​.

ನಿರ್ದೇಶಕರ ಹುದ್ದೆಗೆ ಸಮಾನ ಆಗಿರುವ ಅಧಿಕಾರಿಯೋರ್ವರಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದ್ದರಿಂದ ಅಲ್ಲಿ ಆತಂಕ ಪ್ರಾರಂಭವಾಗಿದೆ. ಇಡೀ ಕಟ್ಟಡ ಮತ್ತು ಅದರ ಆವರಣವನ್ನು ಸೋಂಕು ನಿವಾರಕದಿಂದ ಶುದ್ಧ ಮಾಡಬೇಕಾಗಿರುವ ಕಾರಣ 48 ಗಂಟೆಗಳ ಕಾಲ ಅಲ್ಲಿ ಸಂಪೂರ್ಣ ಬಂದ್​ ಮಾಡಲಾಗಿದೆ ಎಂದು ನೀತಿ ಆಯೋಗದ ಉಪ ಕಾರ್ಯದರ್ಶಿ ಅಜಿತ್​ ಕುಮಾರ್​ ತಿಳಿಸಿದ್ದಾರೆ. (ಏಜೆನ್ಸೀಸ್​),