ನ್ಯೂಸ್

I Love Him.. ಆದರೆ ಅದು ಅವರಿಗೆ ಗೊತ್ತಿಲ್ಲ; ನಟಿ ನಿತ್ಯಾ ಮೆನನ್​​ ಹೀಗೆಳಿದ್ದು ಯಾರಿಗೆ? | Nithya Menen

ಚೆನ್ನೈ: ಜೋಶ್​, ಮೈನಾ, ಕೋಟಿಗೊಬ್ಬ 2 ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿರುವ ನಟಿ ನಿತ್ಯಾ ಮೆನನ್(Nithya Menen) ಕುರಿತು ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಕನ್ನಡ ಸಿನಿಮಾ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳು ಸೇರಿದಂತೆನ ಬಾಲಿವುಡ್​ನಲ್ಲೂ ತನ್ನ ನಟನಾ ಕೌಶಲ್ಯ ತೋರಿಸಿ ಸೈ ಎನ್ನಿಸಕೊಂಡಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ, ನಿರ್ಗಳವಾಗಿ ಮಾತನಾಡುವ ಈ ನಟಿಯ ವಿಚಾರ ತಿಳಿದುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಸೆಲಿಬ್ರಿಟಿಗಳಲ್ಲಿ ನಿತ್ಯಾ ಮೆನನ್​ ಕೂಡ ಒಬ್ಬರು ಎಂದರೆ ತಪ್ಪಾಗಲಾರದು.

ಇತ್ತೀಚೆಗೆ ನಿತ್ಯಾ ಮೆನನ್​ ಅವರ ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಆದರೀಗ ಸಂದರ್ಶನವೊಂದರಲ್ಲಿ ನಿರೂಪಕ ಕೇಳಿದ ಪ್ರಶ್ನೆಗೆ ಬ್ಲಶ್​ ಆದ ನಟಿ ಸಪ್ರೈಸ್​​ ಆಗುತ್ತಿದೆ. ಆತನೆಂದರೆ ನನಗೆ ಇಷ್ಟ ಎಂದು ಹೇಳಿದ್ದಾರೆ. ಐ ಲವ್​ ವಿಜಯ್​ ಪ್ರಕಾಶ್​​.. ಪಾಪಾ ಅವರಿಗೆ ಇದು ಗೊತ್ತಿಲ್ಲ. ನನಗೆ ಅವರ ವಾಯ್ಸ್​ ಎಂದರೆ ಬಹಳ ಇಷ್ಟ. ಅದಷ್ಟೆ ಅಲ್ಲದೆ ಅವರು ಕನ್ನಡ ಸಾಂಗ್​ ಹಾಡುತ್ತಾರೆ. ನನಗೆ ಕನ್ನಡ ಭಾಷೆ ಮಾತೃ ಭಾಷೆ ಇದ್ದಂತೆ, ಸೋ ಐ ಲವ್​ ಹಿಸ್​ ಕನ್ನಡ ಸಾಂಗ್ಸ್​​ ಎಂದು ಹೇಳಿದ್ದಾರೆ.

ಯಾವುದಾದರೂ ತೆಲುಗು, ತಮಿಳು, ಕನ್ನಡದಲ್ಲಿ ವಿಜಯ್ ಪ್ರಕಾಶ್​ ಹಾಡಿರುವ ಹಾಡೊಂದನ್ನು ಹಾಡುವಂತೆ ಕೇಳಿದಾಗ, ನಟಿ ನಿತ್ಯಾ ಮೆನನ್​ ವಿಜಯ್​ ಪ್ರಕಾಶ್ ಅವರು ಹಾಡಿರುವ ಎಷ್ಟೋ ಹಾಡುಗಳು ನನಗಿಷ್ಟ. ಅದರಲ್ಲಿ ಸುದೀಪ್​ ಅಭಿಯನದ ಸಿನಿಮಾದಲ್ಲಿನ ಒಂದು ಹಾಡು ವಿಜಯ್​ ಪ್ರಕಾಶ್​​ ಹಾಡಿದ್ದಾರೆ, ಅದು ನನಗೆ ಬಹಳ ಇಷ್ಟ. ಸುದೀಪ್ ಕೂಡ ನನಗೆ ಕ್ಲೋಸ್​ ಫ್ರೆಂಡ್ ಎಂದು ಹೇಳುತ್ತಾ ನಿತ್ಯಾ ಮೆನನ್​​ ತಾವು ಅದೇ ಸಾಲುಗಳನ್ನು ಹಾಡಿದರು. ಹಲೋ..ಹಲೋ ಸಾಂಗ್​ ಹಾಡಿ ಈ ಹಾಡು ಬಹಳ ಚೆನ್ನಾಗಿದೆ ಎಂದರು.

ಇತ್ತೀಚೆಗಷ್ಟೇ 'ತಿರುಚಿತ್ರಾಂಬಲಂ' ಸಿನಿಮಾದಲ್ಲಿನ ಅಭಿನಯಕ್ಕಾಗಿ ನಿತ್ಯಾ ಮೆನನ್‌ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ನಿತ್ಯಾ ಮೆನನ್​ ಮತ್ತು ಜಯಂ ರವಿ ನಟನೆಯ ಸಿನಿಮಾ 'ಕಾದಲಿಕ್ಕ ನೆರಮಿಲ್ಲೈ’ ಇತ್ತೀಚೆಗೆ ಬಿಡುಗಡೆಗೊಂಡಿದೆ. (ಏಜೆನ್ಸೀಸ್​)