ನ್ಯೂಸ್

ಗ್ಲಾಮರಸ್ ಲುಕ್​​​ನಲ್ಲಿ ಚಿಟ್ಟೆಯಂತೆ ಮಿಂಚಿದ ನಿಶ್ವಿಕಾ ನಾಯ್ಡು, ಈ ಚಿಟ್ಟೆ ಹಾರಿ ಹೋಗುತ್ತಾ ಎಂದು ಪ್ರಶ್ನಿಸಿದ ಪಡ್ಡೆ ಹುಡುಗರು..!

ದಿನದಿಂದ ದಿನಕ್ಕೆ ನಿಶ್ವಿಕಾ ನಾಯ್ಡು ಗ್ಲಾಮರಸ್​​ ಲುಕ್​​ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ನಿಶ್ವಿಕಾ ಬೋಲ್ಡ್​​ ಫೋಟೋಸ್​​ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗುತ್ತಿದೆ. ಪಡ್ಡೆ ಹುಡುಗರು ʼಆಣೆ ಮಾಡಿ ಹೇಳುತಿನಿ ನೀನು ನನ್ನವಳುʼ ಅಂತ ಹಾಡು ಹಾಡಲು ಶುರುಮಾಡಿದ್ದಾರೆ. ಅಲ್ಲದೆ, ʼಯಾವ ಊರಿನ್‌ ರಾಣಿ ನೋʼ ರಾಮಾ ರಾಮಾ ಅಂತ ಕೇಳುತ್ತಿದ್ದಾರೆ.


ಅಪರೂಪದ ಸುಂದರಿ ನಿಶ್ವಿಕಾ ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ʼಅಮ್ಮ ಐ ಲವ್‌ ಯೂʼ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದ ಚೆಲುವೆ ಇದೀಗ ಎಲ್ಲರ ಫೇವರಿಟ್‌ ಆಗಿದ್ದಾರೆ.

ನಿಶ್ವಿಕಾ ಇದೀಗ ಕಂದು ಬಣ್ಣದ ಚಿಟ್ಟೆಯ ಕ್ರಾಪ್​ ಟಾಪ್​ ಮತ್ತು ಕ್ರೀಮಿಶ್​​ ಲಾಂಗ್​ ಸ್ಕರ್ಟ್​​ ಧರಿಸಿ ಫೋಟೋ ಶೂಟ್​​ ಮಾಡಿಸಿದ್ದಾರೆ. ಲೈಟ್​ ಪಿಂಕ್​​ ಲಿಪ್ಸ್​​ಟಿಕ್​ ಮತ್ತು ಲೈಟ್​​ ,ಮೇಕಪ್​ನಲ್ಲಿ ನಿಶ್ವಿಕಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ನಿಶ್ವಿಕಾ ಐ ಮೇಕಪ್​ ಕೂಡಾ ಸಿಂಪಲ್​ ಆಗಿಯೇ ಇದೆ. ಫ್ರೀ ಹೇರ್ಸ್​​ ಬಿಟ್ಟು ನಿಶ್ವಿಕಾ ಸಿಂಪಲ್​​ ಮತ್ತು ಎಲೆಗೆಂಟ್​​​ ಲುಕ್​ನಲ್ಲಿ ಕೊಟ್ಟ ಪೋಸ್​ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.


ನಿಶ್ವಿಕಾ ಸೌಂದರ್ಯ ಸಿರಿಗೆ ಮನಸೋಲದವರೇ ಇಲ್ಲ. ʼಗುರುಶಿಷ್ಯರುʼ ಸಿನಿಮಾದಲ್ಲಿ ಶರಣ್‌ಗೆ ಜೊಡಿಯಾಗಿ ನಟಿಸಿದ್ದ ಈಕೆ ʼದಿಲ್‌ ಪಸಂದ್‌ʼ ಮೂಲಕ ಕನ್ನಡಿಗರಿಗೆ ತುಂಬಾ ಹತ್ತಿರವಾದ್ರು.


ಸ್ಯಾಂಡಲ್‌ವುಡ್‌ ಡಾಲ್‌ ಸದ್ಯ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಫೋಟೋಸ್‌ ನೋಡಿದವರು ಮೇಡಂ ನೀವು ಸೂಪರ್‌.. ಎನ್ನುತ್ತಿದ್ದಾರೆ.


ಇತ್ತೀಚಿಗೆ ಸೀರೆಯುಟ್ಟು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದ ಚೆಲುವೆ ಇದೀಗ ಕ್ರಾಪ್​ ಟಾಪ್​ ಮತ್ತು ಗೌನ್​ ತೊಟ್ಟು ಮಿಂಚಿದ್ದಾರೆ.
ʼದಿಲ್‌ ಪಂಸದ್ʼ‌ ಸಿನಿಮಾದಲ್ಲಿ ಬೋಲ್ಡ್‌ ಅವತಾರ ತಾಳಿದ್ದ ಮುದ್ದುಗೊಂಬೆಯ ಅಂದಕ್ಕೆ ಯುವಪಡೆ ಮನಸೋತಿತ್ತು. ಇದೀಗ ಅವರ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ.