ನ್ಯೂಸ್

ಅನುರಾಗ್​ ಕಶ್ಯಪ್​ ನಿರ್ದೇಶನದ ನಿಶಾಂಚಿ ಟ್ರೇಲರ್​ ಔಟ್​​! | Nishaanchi

Nishaanchi: ಅನುರಾಗ್​ ಕಶ್ಯಪ್​ ನಿರ್ದೇಶನದ ನಿಶಾಂಚಿ ಚಲನಚಿತ್ರದ ಟ್ರೇಲರ್​ ಇದೀಗ​ ಬಿಡುಗಡೆಗೊಂಡಿದ್ದು, ಇದೀಗ ಪೂರ್ಣ ಪ್ರಮಾಣದ ಬಾಲಿವುಡ್​ ಮಸಾಲದಂತೆ ತೆರೆ ಮೇಲೆ ಕಾಣುತ್ತಿದೆ. ಈ ಚಿತ್ರವು ಹಾಸ್ಯ, ಪ್ರಣಯ, ದ್ರೋಹ, ಮತ್ತು ತಾಯಿಯ ಪ್ರೀತಿಯನ್ನು ಈ ​ಟ್ರೇಲರ್​ನಲ್ಲೇ ತೋರಿಸಿ ಸಿನಿಮಾದ ಕಥೆಯ ಬಗ್ಗೆ ಕುತೂಹಲ ಹುಟ್ಟುಹಾಕಿದೆ. ಇನ್ನು ಶಿವಸೇನಾ ಸಂಸ್ಥಾಪಕ ಬಾಲ್​ ಠಾಕ್ರೆ ಅವರ ಮೊಮ್ಮಗನಾದ ಐಶ್ವರ್ಯ ಠಾಕ್ರೆ ಈ ಚಿತ್ರದ ಮೂಲಕ ಬಾಲಿವುಡ್​​ ರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

ಭಾರೀ ಸಂಚಲನ ಮೂಡಿಸಿದ ಟ್ರೇಲರ್‌!

ನಿಶಾಂಚಿ ಚಿತ್ರದಲ್ಲಿ ಕೇಂದ್ರಬಿಂದುವಾಗಿರುವ ಐಶ್ವರಿ, ಅವಳಿ ಸಹೋದರರಾದ ಬಬ್ಲೂ ಮತ್ತು ಡಬ್ಲೂ ದ್ವಿಪಾತ್ರದಲ್ಲಿ ತೆರೆಯ ಮೇಲೆ ಪಾದಾರ್ಪಣೆ ಮಾಡಲಿದ್ದಾರೆ. ಹಾಗೇಯೇ ಅವರು ಈ ನೋಟದಲ್ಲಿ ಈ ಪ್ರತಿಬಿಂಬಗಳು ಭಿನ್ನವಾಗಿದ್ದು, ನೋಡುಗರನ್ನು ಅಚ್ಚರಿಗೊಳಿಸಲು ಸಜ್ಜಾಗಿದ್ದಾರೆ. ಇನ್ನು ಸಿನಿಮಾವು 2000 ರ ದಶಕದ ಆರಂಭದಲ್ಲಿ ಉತ್ತರ ಪ್ರದೇಶದ ಸಣ್ಣ ಪಟ್ಟಣದ ಕೊಳಕು ಕಂದಕಗಳಲ್ಲಿ ನೆಲೆಗೊಂಡಿರುವ ನಿಶಾಂಚಿ, ದಂಗೆ, ಕೌಟುಂಬಿಕ ನಾಟಕ ಮತ್ತು ವೈಯಕ್ತಿಕ ರೂಪಾಂತರದ ಬಿರುಗಾಳಿಯಲ್ಲಿ ಸಿಲುಕಿ ಡಿಕ್ಕಿ ಹೊಡೆಯುವಾಗ ಆಗುವ ಅವರ ಜೀವನದ ಅವ್ಯವಸ್ಥೆ ಬಗ್ಗೆ ಈ ಚಿತ್ರ ಸುತ್ತುವರೆದಿದೆ.

ಈ ಟ್ರೇಲರ್​ ವೀಕ್ಷಿಸುತ್ತಿದ್ದಂತೆಯೇ ಅತಿಬೇಗನೆ ಆಕರ್ಷಣೆಗಳಾಗುತ್ತವೆ. ಇನ್ನು ಇದರಲ್ಲಿರುವ ಉತ್ಸಾಹ ಭರಿತ ಮುಖಾಮುಖಿಗಳು, ಪ್ರೀತಿ ಹಾಗೂ ಹಾತೊರೆಯುವ ಕೋಮಲ ಕ್ಷಣಗಳನ್ನು ನೀಡುತ್ತದೆ. ಹಾಗೆಯೇ, ಈ ಆಸಕ್ತಿದಾಯಕ ಚಲನಚಿತ್ರವು 2000 ದಶಕದ ಆರಂಭದ ಹಿನ್ನಲೆಗೆ ನೋಡುಗರನ್ನು ಕೊಂಡೊಯ್ಯತ್ತದೆ. ಇನ್ನು ಈ ಚಿತ್ರದ ಬಗ್ಗೆ ಅನುರಾಗ್​ ಮಾತನಾಡಿದ್ದು, ನಿಶಾಂಚಿ ನನ್ನ ಅತ್ಯಂತ ಸಿನಿಮೀಯ ಚಿತ್ರ. ಈ ಸಿನಿಮಾವು ಕ್ಲಾಸಿಕ್​ ಕಥೆಯಾಗಿ ಹೊರಹೊಮ್ಮಿದ್ದು, ಇದರಲ್ಲಿ ಪ್ರೀತಿ, ದ್ವೇಶ, ದ್ರೋಹ, ಭಾವನೆಗಳು ಒಳಗೊಂಡಿವೆ ಎಂದರು. (ಏಜೆನ್ಸೀಸ್​)