ನ್ಯೂಸ್

ರಷ್ಯಾ, ಚೀನಾ ಜತೆ ನಿರ್ಮಲಾ ಚರ್ಚೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಷ್ಯಾ ಮತ್ತು ಚೀನಾದ ಹಣಕಾಸು ಸಚಿವರ ಜತೆ ಸಭೆ ನಡೆಸಿ ವಿವಿಧ ದ್ವಿಪಕ್ಷೀಯ ವಿಷಯಗಳ ಕುರಿತು ರ್ಚಚಿಸಿದ್ದಾರೆ. ರಿಯೊ ಡಿ ಜನೈರೊದಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ವಿತ್ತ ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್​ಗಳ ಸಭೆಯ ಸಂದರ್ಭದಲ್ಲಿ ಈ ಮಾತುಕತೆ ನಡೆದಿದೆ.

ರಷ್ಯಾದ ವಿತ್ತ ಸಚಿವ ಆಂಟನ್ ಸಿಲುವಾನೋವ್ ಅವರೊಂದಿಗಿನ ಸಭೆಯಲ್ಲಿ, ಪಹಲ್​ಗಾಂ ಭಯೋತ್ಪಾದಕ ದಾಳಿ ಕುರಿತು, ಉಭಯ ದೇಶಗಳ ದೀರ್ಘಕಾಲದ ಪಾಲುದಾರಿಕೆಯ ಬಗ್ಗೆ ಚರ್ಚೆ ನಡೆಯಿತು. ಚೀನಾ ವಿತ್ತ ಸಚಿವ ಲಾನ್ ಫೊಆನ್ ಜತೆಗಿನ ಸಭೆಯಲ್ಲಿ, ಮಾನವ ಸಂಪನ್ಮೂಲ, ವಿವಿಧ ಕ್ಷೇತ್ರಗಳಲ್ಲಿನ ಆರ್ಥಿಕ ಸಹಕಾರ ಬಲಪಡಿಸುವ ಬಗ್ಗೆ ಚರ್ಚೆಯಾಯಿತು. ಇಂಡೋನೇಷ್ಯಾ, ಬ್ರೆಜಿಲ್ ದೇಶಗಳ ವಿತ್ತ ಸಚಿವರ ಜತೆಯೂ ನಿರ್ಮಲಾ ಮಾತುಕತೆ ನಡೆಸಿದರು ಎಂದು ವಿತ್ತ ಸಚಿವಾಲಯ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.