ನ್ಯೂಸ್

ನಿರ್ಭಯಾ ಅತ್ಯಾಚಾರ ಪ್ರಕರಣ: ಇನ್ನೋರ್ವ ಆರೋಪಿ ಪವನ್​ಕುಮಾರ್​ನಿಂದ ಮತ್ತೊಂದು ಕಾನೂನು ಪ್ರಕ್ರಿಯೆ

lakshmihegde

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿ ಮುಕೇಶ್​ ಸಿಂಗ್​ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಿರಸ್ಕರಿಸಿದ ಬೆನ್ನಲ್ಲೇ ಇನ್ನೋರ್ವ ಆರೋಪಿ ಪವನ್​ ಕುಮಾರ್​ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾನೆ.

ದೆಹಲಿ ಪಟಿಯಾಲ ಕೋರ್ಟ್​ ಜಾರಿ ಮಾಡಿರುವ ಡೆತ್​ ವಾರಂಟ್​ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ. ಈ ಮಧ್ಯೆ ತಿಹಾರ್​ ಜೈಲು ಅಧಿಕಾರಿಗಳು ಅಪರಾಧಿಗಳಿಗೆ ಬ್ಯ್ಲಾಕ್​ ವಾರಂಟ್​ ಜಾರಿ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ.