ನ್ಯೂಸ್

ನಿಖಿಲ್ ಸೋಲು ಮೈತ್ರಿಗೆ ಮರ್ಮಾಘಾತ; ವರ್ಕ್‌ಔಟ್ ಆಗದ ಜಾತಿ ಸಮೀಕರಣ|Nikhil's defeat is a shock to the alliance

ಬೆಂಗಳೂರು: ವರ್ಣಭೇದ ನೀತಿಯ ಮೂಲಕ ಜನಾಂಗೀಯ ನಿಂದನೆ, ಘಟಾನುಘಟಿಗಳ ಪ್ರಚಾರದ ನಡುವೆಯೂ ಚನ್ನಪಟ್ಟಣದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು(NDA alliance candidate Nikhil Kumaraswamy lost) ಆಘಾತ ಉಂಟು ಮಾಡಿದೆ.

ನಿಖಿಲ್ ಸತತ ಮೂರು ಚುನಾವಣೆಯಲ್ಲಿ ಸೋಲು ಕಂಡಿರುವುದು ಜೆಡಿಎಸ್ ಬಲವನ್ನೇ ಬಗ್ಗಡವಾಗಿಸಿದೆ. ಬಿಜೆಪಿ ಜತೆ ಕೈಜೋಡಿಸಿದ ಜೆಡಿಎಸ್ ಈ ಚುನಾವಣೆಯಲ್ಲಿ ದೊಡ್ಡಮಟ್ಟದ ಗೆಲುವು ನಿರೀಕ್ಷಿಸಿತ್ತು.

ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಆರು ದಿನ ಚನ್ನಪಟ್ಟಣದಲ್ಲೇ ಠಿಕಾಣಿ ಹೂಡಿ ನಡೆಸಿದ ಎಲ್ಲ ತಂತ್ರಗಳು ಫಲ ಕೊಡಲಿಲ್ಲ. ಇಳಿ ವಯಸ್ಸಿನಲ್ಲೂ 20ಕ್ಕೂ ಹೆಚ್ಚು ಬಹಿರಂಗ ಪ್ರಚಾರದಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರೂ ಪ್ರಯೋಜನವಾಗಲಿಲ್ಲ. ಒಕ್ಕಲಿಗ ಹಾಗೂ ಸಣ್ಣ ಸಣ್ಣ ಸಮುದಾಯಗಳ ಕ್ರೋಡೀಕರಣಕ್ಕೆ ನಡೆಸಿದ ಪ್ರಯತ್ನವೂ ವಿಲವಾದಂತಾಗಿದೆ.

ಕಳೆದ ಲೋಕಸಭೆ, ವಿಧಾನಸಭೆ ಸೋಲಿನಿಂದ ಕಂಗೆಟ್ಟಿದ್ದ ನಿಖಿಲ್ ಅವರನ್ನು ಗೆಲ್ಲಿಸಿಕೊಂಡು ಬರಲೇಬೇಕೆಂದು ಜೆಡಿಎಸ್ ನಾಯಕರು ಮಾಡಿದ ಶಪಥಗಳು ಕೈಕೊಟ್ಟಿವೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮುಗ್ಗರಿಸಿರುವುದು ವರಿಷ್ಠರನ್ನು ಕಂಗೆಡಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಚುನಾವಣಾ ರ‌್ಯಾಲಿಯಲ್ಲಿ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಆಡಿದ ‘ಕರಿಯ’ ಪದ ಬಳಕೆಯನ್ನು ಎನ್‌ಡಿಎ ಪಕ್ಷಗಳು ನಾನಾ ರೀತಿಯಲ್ಲಿ ಬಳಸಿಕೊಂಡು ಒಕ್ಕಲಿಗ ಸಮುದಾಯದ ಹಾಗೂ ಹಿಂದು ಮತ ಕ್ರೋಡೀಕರಣಕ್ಕೆ ನಡೆಸಿದ ಪ್ರಯತ್ನಗಳು ನಿರೀಕ್ಷಿತ ಲ ಕೊಡದಿರುವುದು ಲಿತಾಂಶದಿಂದ ಸಾಬೀತಾಗಿದೆ.

ಕಣ್ಣೀರಿಗೆ ಕರಗದ ಮತದಾರ

ದೇವೇಗೌಡ(Devegowda)ರ ಕಣ್ಣೀರು ಈ ಚುನಾವಣೆಯಲ್ಲಿ ದೊಡ್ಡ ಸದ್ದು ಮಾಡಿತ್ತು. ಲೋಕಸಭೆ ಮಾಜಿ ಸದಸ್ಯ ಡಿ.ಕೆ.ಸುರೇಶ್ ದೇವೇಗೌಡರು ಚುನಾವಣಾ ರಂಗ ಪ್ರವೇಶ ಮಾಡುವ ಮುನ್ನವೇ ಅವರ ಕಣ್ಣೀರಿನ ಪ್ರಚಾರವನ್ನು ಲೇವಡಿ ಮಾಡಿದ್ದರು. ಇದನ್ನೇ ಜೆಡಿಎಸ್, ಬಿಜೆಪಿ ಅಸ ಮಾಡಿಕೊಳ್ಳುವ ಪ್ರಯತ್ನ ನಡೆಸಿದವು. ದೇವೇಗೌಡರ ಕಣ್ಣೀರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊಚ್ಚಿ ಹೋಗುತ್ತಾರೆ ಎಂದು ಅಬ್ಬರಿಸಿದರು. ಇದಾದ ಬಳಿಕ ನಿಖಿಲ್ ಕುಮಾರಸ್ವಾಮಿ ಹಾಗೂ ದೇವೇಗೌಡರು ಚುನಾವಣಾ ಪ್ರಚಾರದಲ್ಲಿ ಕಣ್ಣೀರು ಹಾಕಿದರು. ಕಟುಕರಿಗೆ ಕಣ್ಣೀರು ಬರುವುದಿಲ್ಲ ಎಂದೂ ಕಾಂಗ್ರೆಸ್ ನಾಯಕರನ್ನು ಕುಟುಕಿದರು.

ವರ್ಕ್‌ಔಟ್ ಆಗದ ಮೈತ್ರಿ

ಬಿಜೆಪಿಯಿಂದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಘಟಾನುಘಟಿ ನಾಯಕರು ಪ್ರಚಾರ ನಡೆಸಿದರೂ ನಿಖಿಲ್ ಕುಮಾರಸ್ವಾಮಿಗೆ ಸೋಲಾಗಿದೆ. ಈ ಕ್ಷೇತ್ರವನ್ನು ಗೆಲ್ಲುವ ಮೂಲಕ ಒಕ್ಕಲಿಗ-ಲಿಂಗಾಯತ ಸಮುದಾಯಗಳು ಒಂದಾದರೆ ಕಾಂಗ್ರೆಸ್ ಸೋಲಿಸಬಹುದೆಂಬ ಸಂದೇಶ ಸಾರಬೇಕೆಂಬ ಎನ್‌ಡಿಎ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮೈತ್ರಿ ಮುಂದುವರಿಯುವುದರ ಬಗ್ಗೆಯೇ ಅನುಮಾನ ಉಂಟಾಗಿದೆ.

ಅರ್ಜುನನಾಗದ ನಿಖಿಲ್!

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಅಭಿಮನ್ಯು ಅಲ್ಲ, ಅರ್ಜುನನಾಗಿ ಹೊರ ಹೊಮ್ಮಲಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಬೀಗಿದ್ದರು. ಅದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಮಂಡ್ಯ ಲೋಕಸಭೆಗೆ ನಿಖಿಲ್ ಸ್ಪರ್ಧಿಸಿದಾಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಆ ಬಳಿಕ ರಾಮನಗರ ಚುನಾವಣೆಯಲ್ಲೂ ಪರಾಭವಕಂಡಿದ್ದರು. ಆಗ ಆಗ ಅಭಿಮನ್ಯು ಆಗಿರಲಿಲ್ಲವೇ ಎಂದು ಟಾಂಗ್ ಕೊಟ್ಟಿದ್ದರು.