ನ್ಯೂಸ್

ನೈಜೀರಿಯಾ ಮೂಲದ ಡ್ರಗ್​ ಪೆಡ್ಲರ್​ಗಳು ಕರ್ನಾಟಕದಲ್ಲಿ ಅಂದರ್​…

ಬೆಂಗಳೂರು: ಭಾರತಕ್ಕೆ ನೈಜೀರಿಯಾ ಪ್ರಜೆಗಳು ಬರುವುದೇ ಡ್ರಗ್ಸ್​ ಮಾರಲು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೀಸಾ ಅವಧಿ ಮುಗಿದ ಮೇಲೆಯೂ ಭಾರತದಲ್ಲೇ ಉಳಿಯುವ ಇವರನ್ನು ಹಿಡಿಯುವುದೇ ಕಷ್ಟ. ಇದೀಗ ಅಮೃತಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ನೈಜೀರಿಯಾದ ಡ್ರಗ್​ ಪೆಡ್ಲರ್​ಗಳನ್ನು ಸೆರೆ ಹಿಡಿದಿದ್ದಾರೆ.

ಭಾರತದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಹಾಗೂ ಅಂತರರಾಜ್ಯ ಡ್ರಗ್ ಪೆಡ್ಲರ್​ಗಳನ್ನು ಅಮೃತಹಳ್ಳಿ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಲುಂಬಿನಿ ಗಾರ್ಡನ್​ ಬಳಿಯ ಸರ್ವೀಸ್​ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಕೊಕೇನ್​ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಅದಾಗಲೇ ಈ ಪ್ರಕರಣದ ಜಾಡು ಹಿಡಿದಿದ್ದ ಅಮೃತಹಳ್ಳಿಲ ಪೊಲೀಸರು ಆರೋಪಿಗಳನ್ನು ರೆಡ್​ ಹ್ಯಾಂಡ್​ ಆಗಿ ಬಂಧಿಸಿದ್ದಾರೆ.

ರೆಡ್​ಹ್ಯಾಂಡ್​ ಆಗಿ ಇಬ್ಬರ ಬಂಧನವಾದ ಕೂಡಲೆ ಅವರ ವಿಚಾರಣೆ ನಡೆಸಿದ ಪೊಲೀಸರು ಇನ್ನೂ ಹತ್ತು ಜನರನ್ನು ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ. ಸದ್ಯ ಒಟ್ಟು 12 ಮಂದಿ ಪೆಡ್ಲರ್​ಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ ಕೊಕೇನ್​ ಹಾಗೂ ಎಕ್ಸ್​ಟಸಿ ಪಿಲ್ಸ್​ ಎನ್ನುವ ಡ್ರಗ್ಸ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು AZZA ಎಂಬ ಕೋಡ್​ ವರ್ಡ್​ ಬಳಸಿ ಬ್ಯಾಂಕ್​ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.