ಬಾಲಿವುಡ್ ಬ್ಯೂಟಿ ಪ್ರಿಯಾಂಕ ಪತಿ ನಿಕ್ ಜೋನಸ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಆ್ಯಕ್ಟಿವ್ ಆಗಿರುತ್ತಾರೆ. ಇನ್ನು ಇವರಿಬ್ಬರ ಜೋಡಿ ಸದಾ ಟ್ರೆಂಡಿಂಗ್ನಲ್ಲಿರುತ್ತೆ. ಯಾಕಂದ್ರೆ ಇವರಿಬ್ಬರೂ ತಮ್ಮ ಮಗುವಿನ ಫೋಟೋವನ್ನ ಆಗಾಗ ಹಂಚಿಕೊಳ್ಳುತ್ತಿರ್ತಾರೆ.
ನಿಕ್ ಬ್ರದರ್ಸ್ ಜೊತಯಾಗಿ ಮ್ಯೂಸಿಕಲ್ ನೈಟ್ಗಳನ್ನ ಕೂಡಾ ಮಾಡುತ್ತಾರೆ. ನಿಕ್ ಜೋನಸ್ ಅವರ ಮ್ಯೂಸಿಕ್ ಬ್ಯಾಂಡ್ ಇದೆ. ಇನ್ನು ಇವರಿಬ್ಬರೂ ನಡೆಸುವ ಮ್ಯೂಸಿಕ್ ಬ್ಯಾಂಡ್ಗೆ ವಿಶೇಷ ಫ್ಯಾನ್ ಬೇಸ್ ಕೂಡಾ ಇದೆ. ಕಾರ್ಯಕ್ರಮವನ್ನ ವೀಕ್ಷಿಸೋದಕ್ಕಾಗಿ ಜನರು ನಾ ಮುಂದು ತಾಮುಂದು ಎನ್ನುವಂತೆ ಮುಗಿ ಬೀಳ್ತಾರೆ.
ಜೋನಸ್ ಬ್ರದರ್ಸ್ ಇತ್ತೀಚೆಗಷ್ಟೆ ಹೊಸದಾದ ಮ್ಯೂಸಿಕ್ ಟೂರ್ ಕೈಗೊಂಡಿದ್ದು, ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳನ್ನ ನೀಡಿದ್ದಾರೆ. ನಿಕ್ ಕಾರ್ಯಕ್ರಮವೊಂದನ್ನ ನಡೆಸುತ್ತಿದ್ದಾಗ ವೇದಿಕೆಯಲ್ಲಿ ಎಡವಿ ಬಿದ್ದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಮ್ಮ ಕಾರ್ಯಕ್ರಮವನ್ನ ನಡೆಸುವಾಗ ಹಾಡುತ್ತಲೇ ವೇದಿಕೆಯ ತುದಿಗೆ ಬಂದಿದ್ದಾರೆ. ಹಾಡುತ್ತಿರುವಾಗ ಅವರ ಗಮನಕ್ಕೆ ಬಾರದೇ ಎಡವಿ ಬಿದ್ದಿದ್ದಾರೆ. ಆದರೂ ಏನೂ ಆಗೇ ಇಲ್ಲ ಎಂಬಂತೆ ಕೆಲವೇ ಸೆಕೆಂಡ್ಗಳಲ್ಲಿ ಮತ್ತೆ ಹಾಡೋಕೆ ಪ್ರಾರಂಭಿಸಿದ್ದಾರೆ.
ಇತ್ತೀಚೆಗಷ್ಟೆ ಪತಿಯ ಹೊಸ ಮ್ಯೂಸಿಕ್ ಟೂರ್ಗೆ ಅಭಿನಂದನೆ ಸಲ್ಲಿಸಿದ ಪ್ರಿಯಾಂಕ ಚೋಪ್ರಾ ''ನಾನು ನಿಮ್ಮನ್ನು ಪಡೆಯಲು ಅದೃಷ್ಟಶಾಲಿ. ಹೊಸ ಮ್ಯೂಸಿಕ್ ಟೂರ್ ಪ್ರಾರಂಭಕ್ಕೆ ಅಭಿನಂದನೆಗಳು'' ಎಂದು ಬರೆದುಕೊಂಡಿದ್ದರು.