ನ್ಯೂಸ್

ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿಗೆ NIA ದಾಳಿ; ಅಂತಿಮ ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು

ಮಂಗಳೂರು: ಶಿವಮೊಗ್ಗದ ಟ್ರಾಯಲ್ ಬ್ಲಾಸ್ಟ್ ಮತ್ತು ಉಗ್ರ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊರವಲಯದ ಪಿ.ಎ.ಇಂಜಿನಿಯರಿಂಗ್ ಕಾಲೇಜಿಗೆ ಎನ್​ಐಎ ದಾಳಿ ಮಾಡಿದ್ದು, ಉಡುಪಿ ಮೂಲದ ರಿಹಾನ್ ಶೇಕ್ ಎಂಬಾತನನ್ನು ವಶಕ್ಕೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಎನ್​ಐಎ ಅಧಿಕಾರಿಗಳು ಪ್ರಕರಣವನ್ನು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಬಂಧಿತ ಶಂಕಿತ ಉಗ್ರ ಮಾಝ್ ಮುನೀರ್ ಪಿ.ಎ ಇಂಜಿನಿಯರಿಂಗ್ ಕಾಲೇಜು ಶಿಕ್ಷಣ ಪಡೆದಿದ್ದ. ಟ್ರಾಯಲ್ ಬ್ಲಾಸ್ಟ್​​ನಲ್ಲಿ ಮಾಝ್ ಮುನೀರ್​ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಇದೀಗ ಬೆಂಗಳೂರಿನಿಂದ ಏಳು ಮಂದಿ ಎನ್​ಐಎ ಅಧಿಕಾರಿಗಳು ಆಗಮಿಸಿದ್ದು, ಕಾಲೇಜಿನಲ್ಲಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ಶಂಕಿತ ಉಗ್ರ ಮಾಝ್ ಮುನೀರ್ ನಗರದ ಬಲ್ಮಠದಲ್ಲಿ ವಾಸವಾಗಿದ್ದುಕೊಂಡು ಇಂಜಿನಿಯರಿಂಗ್ ‌ವ್ಯಾಸಾಂಗ ಮಾಡುತ್ತಿದ್ದ. ಇದೀಗ ಮಾಝ್ ಜತೆ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಅನುಮಾನದಲ್ಲಿ ರಿಹಾನ್ ಶೇಖ್​ನನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ಶಿವಮೊಗ್ಗ ಟ್ರಾಯಲ್ ಬ್ಲಾಸ್ಟ್​​ ಪ್ರಕರಣಕ್ಕೆ ಸಂಬಂಧಿಸಿ ಪಿ.ಎ ಕಾಲೇಜಿಗೆ ದಾಳಿ ಮಾಡಲಾಗಿದೆ. ಶಂಕಿತ ಉಗ್ರ ಮಾಝ್ ಮುನೀರ್​ ಜತೆಗೆ ಮಂಗಳೂರು ಕುಕ್ಕರ್ ಬ್ಲಾಸ್ಟ್​ ರುವಾರಿ ಶಾರೀಕ್ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಹಿನ್ನೆಯಲ್ಲಿ ಮಂಗಳೂರಿನ ‌ಕುಕ್ಕರ್ ಬಾಂಬ್ ಸ್ಪೋಟಕ್ಕೂ ಶಿವಮೊಗ್ಗದಲ್ಲಿ ಆದ ಸ್ಫೋಟಕ್ಕೂ ನಂಟು ಇರುವ ಸಾಧ್ಯತೆ ಎಂದು ಅಂದಾಜಿಸಲಾಗಿದೆ.