ನ್ಯೂಸ್

ಎನ್​ಎಫ್​ಸಿ ಸಂಸ್ಥೆಯಿಂದ ಅರ್ಜಿ ಆಹ್ವಾನ; SSLC, ITI ಪೂರ್ಣಗೊಳಿಸಿದವರಿಗೆ ಆದ್ಯತೆ

ನವದೆಹಲಿ: ನ್ಯೂಕ್ಲಿಯರ್​ ಫ್ಯುಯೆಲ್​ ಕಾಂಪ್ಲೆಕ್ಸ್​ ಸಂಸ್ಥೆಯು ಐಟಿಐ ಟ್ರೇಡ್​ ಅಪ್ರೆಂಟಿಸ್​ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದ್ದು, ಸೆ.30ರೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

ಒಟ್ಟು ಹುದ್ದೆ 206. ಐಟಿಐ ಟ್ರೇಡ್​ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ. ಫಿಟ್ಟರ್​, ರ್ಟನರ್​, ಲ್ಯಾಬೊರೇಟರಿ ಅಸಿಸ್ಟೆಂಟ್​, ಎಲೆಕ್ಟ್ರೀಷಿಯನ್​, ಮೆಕ್ಯಾನಿಸ್ಟ್​, ವೆಲ್ಡರ್​ ಹಾಗೂ ಕಂಪ್ಯೂಟರ್​ ಆಪರೇಟರ್​ ಸಹಿತ ವಿವಿಧ ವಿಭಾಗಗಳಿಗೆ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ

ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಎಸ್​ಎಸ್​ಎಲ್​ಸಿ ಮತ್ತು ಐಟಿಐನಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ, ವೇತನ

ಹುದ್ದೆಗೆ ಅರ್ಜಿಸಲ್ಲಿಸು ಅಭ್ಯರ್ಥಿಯ ವಯಸ್ಸು ಅರ್ಜಿಯ ಅಂತಿಮ ದಿನಾಂಕದಂದು ಅಂದರೆ ಸೆ. 30,2023 ಕ್ಕೆ 18 ವರ್ಷಕ್ಕಿಂತ ಕಡಿಮೆಯಿರಬಾರದು. ಹುದ್ದೆಗೆ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 7,700ರೂ.& ಗರಿಷ್ಠ 8,050ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಮೆರಿಟ್​ (ಅರ್ಹತಾ ಪರೀಕ್ಷೆಯ ಅಂಕಗಳ ಶೇಕಡಾವಾರು) ಮತ್ತು ಸಂದರ್ಶನದ ಆಧಾರದ ಮೇಲೆ ಟ್ರೇಡ್​ ಅಪ್ರೆಂಟಿಸ್​ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ?

ನ್ಯೂಕ್ಲಿಯರ್​ ಫ್ಯುಯೆಲ್​ ಕಾಂಪ್ಲೆಕ್ಸ್​ಗೆ ಸಂಬಂಧಿಸಿದ ವೆಬ್​ಸೈಟ್​ಗೆ ಲಾಗಿನ್​ ಮಾಡಿಕೊಳ್ಳಬೇಕು. ಆನ್​ಲೈನ್​ ನಮೂನೆಯ ಅರ್ಜಿ ದೊರೆಯಲಿದ್ದು, ಭರ್ತಿ ಮಾಡಿ ಕಳುಹಿಸಬೇಕು. ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅನುಸಾರ ಮೆರಿಟ್​ ಆಧಾರದಲ್ಲಿ ಹಾಗೂ ನೇರ ಸಂದರ್ಶನ ಮೂಲಕ ಅಭ್ಯರ್ಥಿ ಆಯ್ಕೆ ನಡೆಯಲಿದೆ.