ನ್ಯೂಸ್

ವಿಡಿಯೋ: ದಿಬ್ಬಣದ ಕಾರಿನಿಂದ ನವದಂಪತಿಯ ಜೀವ ಉಳಿಸಿದ ಯುವಕರು

ಪಲಾವು (ಜಾರ್ಖಂಡ್): ಜಾರ್ಖಂಡ್​ನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಕೆರೆ,ನದಿಗಳೆಲ್ಲವೂ ತುಂಬಿ ನೀರು ರಸ್ತೆಯ ಮೇಲೆ ಬಂದುನಿಂತಿದೆ.

ರಸ್ತೆಯಾವುದು, ಹಳ್ಳ-ಕೊಳ್ಳ ಯಾವುದು ಎಂಬುದು ತಿಳಿಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಪಲಾಮು ಎಂಬಲ್ಲಿ ತುಂಬಿ ಹರಿಯುತ್ತಿದ್ದ ಮಲಾಯ್ ನದಿಗೆ ತಿಳಿಯದೇ ಕಾರು ಚಲಾಯಿಸಿಕೊಂಡು ಹೋದ ದಂಪತಿ ಇನ್ನೇನು ಪ್ರಾಣ ಕಳೆದುಕೊಳ್ಳುವುದರಲ್ಲಿದ್ದರು.

ಆದರೆ ಅದನ್ನು ನೋಡಿದ ಕೆಲ ಯುವಕರು ಕಾರಿನಿಂದ ದಂಪತಿಯನ್ನು ರಕ್ಷಿಸಿದ್ದಾರೆ. ಆಗ ತಾನೇ ಮದುವೆ ಮುಗಿಸಿ ಬರುತ್ತಿದ್ದ ಜೋಡಿ ಕಾರಿನಲ್ಲಿತ್ತು. ನೋಡನೋಡುತ್ತಲೇ ಆ ಕಾರು ರಸ್ತೆಯಿಂದ ನದಿಯೆಡೆಗೆ ಜಾರಿತು. ಅದನ್ನು ನೋಡುತ್ತಿದ್ದ ಯುವಕರ ಗುಂಪು ಹಿಂದೆ ಮುಂದೆ ನೋಡದೇ ರಕ್ಷಿಸಲು ನದಿಗೆ ಹಾರಿದೆ.

ಇನ್ನೇನು ಕಾರು ತೇಲಿ ಹೋಗುತ್ತಿದೆ ಎನ್ನುವಷ್ಟರಲ್ಲಿಯೇ ಯುವಕರ ಗುಂಪು ಹಗ್ಗ ಬಳಸಿ ಕೊಚ್ಚಿ ಹೋಗುತ್ತಿದ್ದ ಕಾರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಕೊನೆಗೂ ಕಾರಿನಲ್ಲಿದ್ದ ನವದಂಪತಿ ಹಾಗೂ ಮೂವರು ಸಂಬಂಧಿಕರ ಜೀವ ಉಳಿಸಿದರು.

ಇದರ ವಿಡಿಯೋ ಭಾರಿ ವೈರಲ್​ ಆಗಿದೆ. ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ: