ನ್ಯೂಸ್

ಅತ್ತೆ ಮನೆಗೆ ಕನ್ನ ಹಾಕಿದ ಐನಾತಿ ಸಹೋದರಿಯರು; ಚಿನ್ನ, 2.5 ಲಕ್ಷ ರೂ. ಹಣ ಕದ್ದು ಎಸ್ಕೇಪ್​​​

ಮಧ್ಯಪ್ರದೇಶ: ಇಬ್ಬರು ಸೋದರ ಸಂಬಂಧಿಗಳನ್ನು ವಿವಾಹವಾದ ಉತ್ತರಪ್ರದೇಶದ ಸಹೋದರಿಯರಿಬ್ಬರು ತಮ್ಮ ಅತ್ತೆಯ ಮನೆಯಿಂದ ಚಿನ್ನ ಮತ್ತು 2.5 ಲಕ್ಷ ರೂ. ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಗ್ವಾಲಿಯರ್‌ನ ದರ್ಪಣ್ ಕಾಲೋನಿಯ ನಿವಾಸಿ ಭರತ್ ಗುಪ್ತಾ,ರೋಹಿತ್ ಗುಪ್ತಾ ತಾಟಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಹಾಗೂ ನನ್ನ ಸಹೋದರನ ಪತ್ನಿ ಸೇರಿ ಹಣ ಮತ್ತು ಒಡವೆಯನ್ನು ಕದ್ದು ಪರಾರಿಯಾಗಿದ್ದಾರೆಂದು ತಿಳಿಸಿದ್ದಾರೆ.

ಭರತ್ ಗುಪ್ತಾ ಹಾಗೂ ಸೋದರಸಂಬಂಧಿ ರೋಹಿತ್ ಗುಪ್ತಾ ಉತ್ತರ ಪ್ರದೇಶದ ಗೋರಖ್‌ಪುರ ಮೂಲದ ಸಂಜನಾ ಮತ್ತು ಅಂಜಲಿ ಚೌಹಾಣ್ ಎಂಬ ಇಬ್ಬರು ಸಹೋದರಿಯರ ಜತೆ ಇತ್ತೀಚೆಗೆ ವಿವಾಹವಾಗಿದ್ದರು. ಆದರೆ ಮದುವೆಯಾಗಿ ಐದು ದಿನಗಳ ನಂತರ ಭರತ್ ಕೆಲಸಕ್ಕೆ ತೆರಳಿದಾಗ, ಸಂಜನಾ ಮತ್ತು ಅಂಜಲಿ ಚಿನ್ನ ಮತ್ತು 2.5 ಲಕ್ಷ ರೂಪಾಯಿಗಳೊಂದಿಗೆ ಮನೆಯಿಂದ ಓಡಿಹೋಗಿದ್ದಾರೆ. ಕೂಡಲೇ ಇಬ್ಬರಿಗೂ ಕರೆ ಮಾಡಲು ಪ್ರಯತ್ನಿಸಿದರೂ, ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ನಂತರ ಇಬ್ಬರು ಸಹೋದರರು ಬಂದು ಪೊಲೀಸ್​​​ ಠಾಣೆಯಲ್ಲಿ ಬಂದು ದೂರು ದಾಖಲಿಸಿದ್ದಾರೆ.

ಈ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.