ಶಿವಮೊಗ್ಗ: ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಶೌಚ ಗೃಹದಲ್ಲಿ ನವಜಾತ ಶಿಶುವಿನ ಮೃ*ತದೇಹ ಪತ್ತೆಯಾಗಿದ್ದು, ಮಗುವಿನ ಕತ್ತು ಸೀಳಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ದೇವರಿಗೆ ಆರತಿ ಮಾಡುವಾಗ ನಿಮ್ಮ ಕಣ್ಣುಗಳನ್ನು ತೆರೆದಿಡಬೇಕೇ ಅಥವಾ ಮುಚ್ಚಬೇಕೇ? ಶಾಸ್ತ್ರಗಳಲ್ಲಿ ಹೇಳಿರೋದೇನು.? aarti
ಮೆಗ್ಗಾನ್ ಆಸ್ಪತ್ರೆಯ ಪ್ರಸೂತಿ ಮತು ಸ್ತ್ರೀರೋಗ ವಿಭಾಗದ ಶೌಚ ಗೃಹದಲ್ಲಿ ಒಂದು ದಿನದ ಗಂಡು ಮಗುವಿನ ಮೃತದೇಹ ಸಿಕ್ಕಿದೆ. ಮಗುವಿನ ಮೃತದೇಹ ಕಂಡು ಮೆಗ್ಗಾನ್ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಆ ಮೃತದೇಹವನ್ನು ಪರಿಶೀಲಿಸಿದಾಗ ಮಗುವಿನ ಕತ್ತು ಸೀಳಿರುವುದು ಗೊತ್ತಾಗಿದೆ. ವಿಷಯ ತಿಳಿಯುತ್ತಿದ್ದಂತೆ ದೊಡ್ಡಪೇಟೆ ಪೊಲೀಸರು, ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಮಹಿಳೆಯೊಬ್ಬಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.