ನ್ಯೂಸ್

VIDEO | ಅಬ್ಬಬ್ಬಾ ಎಲ್ಲಿ ನೋಡಿದ್ರು ಜೇನುನೊಣ..ಇಡೀ ನಗರವೇ ಆವೃತ!

ನ್ಯೂಯಾರ್ಕ್: ಜೇನುನೊಣಗಳನ್ನು ನೋಡಿದರೆ ಭಯವಾಗುತ್ತದೆ. ಎರಡು ಮೂರು ಜೇನುನೊಣಗಳನ್ನು ಕಂಡರೆ ಓಡಿ ಹೋಗುತ್ತೇವೆ. ಹೀಗಿರುವಾಗ ಇಡೀ ನಗರವೇ ಜೇನುನೊಣಗಳಿಂದ ತುಂಬಿದೆ. ಈ ವಿಡಿಯೋ ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ನ್ಯೂಯಾರ್ಕ್​​​ನ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನ ಜನರಿಗೆ ಜೇನುನೊಣದಿಂದ ಸಂಕಷ್ಟ ಎದುರಾಗಿದೆ. ಇಡೀ ನಗರವನ್ನು ಜೇನುನೊಣಗಳು ಮುತ್ತಿಗೆ ಹಾಕಿವೆ. ಪ್ರಾಣಿಶಾಸ್ತ್ರಜ್ಞ ಮೈಕಲ್ ಬ್ಲಾಂಕ್ ಅವರು ಈ ವೀಡಿಯೊವನ್ನು ಇನ್​ಸ್ಟಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹನುಮಂತನಿಗೆ ಮೀಸಲಿಡುವ ಖಾಲಿ ಸೀಟಿನ ಪಕ್ಕದ ಸೀಟಿಗೆ ದುಬಾರಿ ಬೆಲೆಯಂತೆ! ಆದಿಪುರುಷ್​ ಚಿತ್ರತಂಡ ಹೇಳಿದ್ದಿಷ್ಟು… ವಿಡಿಯೋದಲ್ಲಿ ಏನಿದೆ?: ಜೇನುನೊಣಗಳ ಹಿಂಡುಗಳನ್ನು ಕಾಣಬಹುದು. ಟೆರೇಸ್‌, ಹೋಟೆಲ್‌, ಕಟ್ಟಡದ ಮೇಲೆ ಕಾಣುತ್ತವೆ.

ಸ್ಥಳೀಯರು ತೀವ್ರ ಆತಂಕದಿಂದ ಅಧಿಕಾರಿಗಳಿಗೆ ದೂರು ನೀಡಿದರು. ಅವುಗಳಿಂದ ಜನರನ್ನು ರಕ್ಷಿಸಲು ಅಧಿಕಾರಿಗಳು ಜೇನುನೊಣ ತಜ್ಞರನ್ನು ಸಂಪರ್ಕಿಸಿದ್ದಾರೆ. ಈ ವಿಡಿಯೋ ಅಪ್ಲೋಡ್ ಆಗಿ ಎರಡು ದಿನಗಳಾಗಿವೆ. ಕೆಲವರು ಜೇನುನೊಣಗಳ ಸಂರಕ್ಷಣೆ ಮಾಡುತ್ತಿದ್ದಾರೆ. ಕೀಟಗಳು ಆಹಾರ ಮತ್ತು ಆಶ್ರಯಕ್ಕಾಗಿ ತಮ್ಮ ಹುಡುಕಾಟದಲ್ಲಿ ಹೊಸ ಆವಾಸಸ್ಥಾನಗಳನ್ನು ಹುಡುಕುತ್ತವೆ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.