ಧರ್ಮಶಾಲಾ: ಇಂದಿನ ಯುಗದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ. ಕಚೇರಿ ಕೆಲಸದಿಂದ ವೈಯಕ್ತಿಯ ಕೆಲಸದವೆರಗೂ ತಂತ್ರಜ್ಞಾನವನ್ನು ಅವಲಂಭಿಸಿದ್ದೇವೆ. ಎಷ್ಟರ ಮಟ್ಟಿಗೆ ಅಂದರೆ ಜನರು ಮದುವೆ ಕಾರ್ಡ್‌ಗಳನ್ನು ಕಳುಹಿಸಲು ದೂರದವರೆಗೆ ಪ್ರಯಾಣಿಸುವ ಬದಲು ವಾಟ್ಸ್ಯಾಪ್ ಮೂಲಕ ಆಹ್ವಾನಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಮದುವೆ ಕಾರ್ಡ್‌ನ PDF ಅನ್ನು ಮಾಡಿ ಅದನ್ನು ವಾಟ್ಸ್ಯಾಪ್ ಮೂಲಕ ದೂರದೂರಿನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಂದೇಶವಾಗಿ ಕಳುಹಿಸುತ್ತಾರೆ. (New scam)
ಆದರೆ ಸೈಬರ್ ಅಪರಾಧಿಗಳು ಇದರಲ್ಲಿಯೂ ವಂಚನೆ ಮಾಡುವುದನ್ನು ಆರಂಭಿಸಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ. ಹೌದು ಈ ಕುರಿತು ಹಿಮಾಚಲ ಪ್ರದೇಶ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ವಿವಾಹ ಆಮಂತ್ರಣ ಹಗರಣದಲ್ಲಿ ವಂಚಕರು ಮೊದಲು ಮದುವೆ ಕಾರ್ಡ್‌ನ ಪಿಡಿಎಫ್ ಅನ್ನು ವಾಟ್ಸ್ಯಾಪ್ ಮೂಲಕ ಜನರಿಗೆ ಹೇಗೆ ಕಳುಹಿಸುತ್ತಾರೆ. ನೀವು ಅದನ್ನು ಡೌನ್‌ಲೋಡ್ ಮಾಡಿದ ತಕ್ಷಣ ನಿಮ್ಮ ಫೋನ್ ಹ್ಯಾಕ್ ಆಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಗರಣದಲ್ಲಿ ಮೊದಲನೆಯದಾಗಿ ನಿಮಗೆ ಮದುವೆಯ ಕಾರ್ಡ್‌ನ PDF ಅನ್ನು ಕಳುಹಿಸಲಾಗುತ್ತದೆ. ನೈಜವಾಗಿ ಕಾಣುವ ಆ apk ಫೈಲ್ ಅನ್ನು ಡೌನ್‌ಲೋಡ್ ಮಾಡಿದ ತಕ್ಷಣ ಅದನ್ನು ತೆರೆಯುತ್ತಿರಿ. ನಂತರ ಮಾಲ್ವೇರ್ ನಿಮ್ಮ ಫೋನ್ ಅನ್ನು ಪ್ರವೇಶಿಸುತ್ತದೆ. ಇದರೊಂದಿಗೆ ಸೈಬರ್ ಅಪರಾಧಿಗಳು ನಿಮ್ಮ ಫೋನ್‌ಗೆ ಸಂಪೂರ್ಣ ಪ್ರವೇಶವನ್ನು ಪಡೆಯುತ್ತಾರೆ ಮತ್ತು ನಿಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡುತ್ತಾರೆ.
ಇದರ ನಂತರ ಅವರು ನಿಮ್ಮ ಫೋನ್ ಅನ್ನು ಯಾವುದೇ ಅಪರಾಧ ಚಟುವಟಿಕೆಗೆ ಬಳಸಬಹುದು. ನಿಮ್ಮ ಫೋನ್‌ನ ಸಂಪೂರ್ಣ ನಿಯಂತ್ರಣವು ಹ್ಯಾಕರ್‌ನ ಕೈಯಲ್ಲಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ನಿಮ್ಮ ಮೊಬೈಲ್ನಿಂದ ಯಾರಿಗಾದರೂ ಸಂದೇಶಗಳನ್ನು ಕಳುಹಿಸಬಹುದು. ಫೋನ್‌ನಲ್ಲಿ ಮಾಲ್‌ವೇರ್ ಸಕ್ರಿಯವಾಗಿರುವ ಕಾರಣ ನಿಮ್ಮ ಡೇಟಾವನ್ನು ಕದಿಯಬಹುದು. ಅವರು ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಅಪ್ಲಿಕೇಷನ್‌ಗಳು ಮತ್ತು ಫೋಲ್ಡರ್‌ಗಳಿಗೆ ಪ್ರವೇಶಿಸಬಹುದು. ಸ್ಕ್ಯಾಮರ್‌ಗಳು ನಿಮಗೆ ತಿಳಿಯದೆ ನಿಮ್ಮ ಖಾತೆಯನ್ನು ತೆರವುಗೊಳಿಸಬಹುದು ಎಂದು ತಿಳಿಸಿದ್ದಾರೆ.
ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕಳುಹಿಸಲಾದ ಸಂದೇಶದಿಂದ ಈ ಹಗರಣ ಪ್ರಾರಂಭವಾಗುತ್ತದೆ. ಅಪರಿಚಿತ ವ್ಯಕ್ತಿ ಕಳುಹಿಸಿದ ಯಾವುದೇ ಸಂದೇಶವನ್ನು ಚಿಂತನಶೀಲವಾಗಿ ಡೌನ್‌ಲೋಡ್ ಮಾಡಿ. ಇನ್ನೂ ಆ APK ಫೈಲ್ ಅನ್ನು ತಪ್ಪಾಗಿ ಡೌನ್‌ಲೋಡ್ ಮಾಡಿದರೆ ತಕ್ಷಣ ಪೊಲೀಸರಿಗೆ ದೂರು ನೀಡಿ. ಈ ಮದುವೆ ಸೀಸನ್‌ನಲ್ಲಿ ಇಂತಹ ಮೋಸಗಳು ತಲೆ ಎತ್ತುತ್ತಿರುವುದು ಅನೇಕರ ಸಂಕಷ್ಟವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)