ನ್ಯೂಸ್

ಬದಲಾಯ್ತು ಕೆಂಪು ಬಸ್ಸಿನ ವಿನ್ಯಾಸ; ಇಲ್ಲಿವೆ ನೋಡಿ ಫೋಟೋಸ್…

Bengaluru - General - Rama Kishan K V

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ಕಾರ್ಯಾಚರಣೆಗೆ ನಿಯೋಜಿಸಲಾಗುವ ನೂತನ ಸಾರಿಗೆ ವಾಹನದ ಫೋಟೋ ಟೈಪ್ ವಾಹನ ವಿನ್ಯಾಸವನ್ನು ನಿಗಮದ ಕೇಂದ್ರ ಕಛೇರಿಯಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪರಿಶೀಲಿಸಿದರು.

ಪ್ರಸ್ತುತ ಪರಿಶೀಲಿಸಲಾದ ಪ್ರೋಟೋ ಟೈಪ್ ವಾಹನವು ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ವಾಹನವನ್ನಾಗಿ ಉಪಯೋಗಿಸಲಿದ್ದು, ಮುಂಬರುವ ಎಲ್ಲಾ ಹೊಸ ಬಸ್ಸುಗಳು ಈ ರೀತಿಯ ವಿನ್ಯಾಸವನ್ನು ಹೊಂದಿರಲಿದೆ.

ವಾಹನದ ಎತ್ತರ 3420 ಮಿ.ಮಿ. ಇದ್ದು, 52 ಆಸನ ಸಂಖ್ಯೆ ಹೊಂದಿದೆ. ಮುಂದಿನ ಹಾಗೂ ಹಿಂದಿನ ಗಾಜು, ಪ್ರಯಾಣಿಕರ ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿದೆ. ವಾಹನದ ಒಳಾಂಗಣದ ಲಗೇಜ್ ಕ್ಯಾರಿಯು ವಿನೂತನ ವಿನ್ಯಾಸ ಹೊಂದಿದೆ.

ಪ್ರಯಾಣಿಕರ ಬಾಗಿಲು ಸ್ವಯಂಚಾಲಿತ ಸೆನ್ಸ್‌ ಮತ್ತು ತುರ್ತು ಬಟನ್ ವ್ಯವಸ್ಥೆ ಇರಲಿದೆ. ಲಗ್ಗೇಜ್ ಕ್ಯಾರಿಯರ್ ವಿಶಾಲವಾಗಿದ್ದು, ಒಳ ಭಾಗದಲ್ಲಿ ಹೆಚ್ಚು ಎತ್ತರವಾಗಿದ್ದು, ಹೆಚ್ಚಿನ ಸಾಮಗ್ರಿಗಳನ್ನು ಸಾಗಿಸಬಹುದಾಗಿದೆ. ಈ ಬಸ್ಸುಗಳು ಎಲ್ಲಾ ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಿದೆ.