ನ್ಯೂಸ್

ಪೊಲೀಸ್​ ಇಲಾಖೆ ವೆಬ್​ಸೈಟ್​ಗೆ ಹೊಸ ರೂಪ! ಅಪೂರ್ಣ ಕೆಎಸ್​ಪಿ ಜಾಲತಾಣಕ್ಕೆ ಗುಡ್​ಬೈ

ಬೆಂಗಳೂರು : ರಾಜ್ಯ ಪೊಲೀಸ್​ ಇಲಾಖೆ ವೆಬ್​ಸೈಟ್​ ಹೊಸ ರೂಪ ಪಡೆದುಕೊಂಡಿದೆ. ಅಪೂರ್ಣ ಮಾಹಿತಿ ಒಳಗೊಂಡ ಹಳೆಯ ಕೆಎಸ್​ಪಿ ವೆಬ್​ಸೈಟ್​ಗೆ ಅಂತ್ಯ ಹಾಡಿರುವ ಪೊಲೀಸ್​ ಇಲಾಖೆ, ಇ-ಆಡಳಿತ ಸಹಾಯದಿಂದ ಹೊಸ ಸ್ವರೂಪ ಇರುವ ವೆಬ್​ಸೈಟ​ನ್ನು ಪರಿಚಯಗೊಳಿಸಿದೆ.

ಕನ್ನಡ ಮತ್ತು ಇಂಗ್ಲೀಷ್​ ಭಾಷೆಯಲ್ಲಿ ಹೊರಬಂದಿರುವ ವೆಬ್​ಸೈಟ್​ ಜನಸಾಮಾನ್ಯರಿಗೂ ಸರಳವಾಗಿ ಮಾಹಿತಿ ಲಭಿಸುವಂತಿದೆ. ಪೊಲೀಸ್​ ಇಲಾಖೆ ಇತಿಹಾಸ, ಆಡಳಿತ ವರ್ಗ, ಅಪರಾಧ ಅಂಕಿಅಂಶ, ಸಂಚಾರ ವಿಭಾಗ, ಪೊಲೀಸ್​ ತರಬೇತಿ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ - ಈ ಎಲ್ಲ ಅಂಶಗಳನ್ನು ವಿವರವಾಗಿ ನೀಡಲಾಗಿದೆ.

ಅಪರಾಧಗಳನ್ನು ಸಂಬಂಧಿಸಿದ ಕಾಯ್ದೆ, ಶಿಕ್ಷೆ, ಅಪರಾಧ ತಡೆಯಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ವಿವರಿಸಲಾಗಿದೆ. ಐಪಿಎಸ್​ ಅಧಿಕಾರಿಗಳಿಂದ ಪೊಲೀಸ್​ ಠಾಣೆಗಳವರೆಗೂ ದೂರವಾಣಿ, ಮೊಬೈಲ್​ ಸಂಖ್ಯೆ ಮತ್ತು ವಿದೇಶಿ ಪ್ರಜೆಗಳ ನೋಂದಣಿ ಮಾಹಿತಿಯೂ ಒಳಗೊಂಡಿದೆ. ಸುಳ್ಳು ಸುದ್ದಿ ಅಸಲಿಯತ್ತು ಕೂಡ ತಿಳಿಯಬಹುದು.

ನಾಗರೀಕ ಸೇವಾ ತಾಣದಲ್ಲಿ ನೇಮಕಾತಿ, ಎಸ್​​ಐಆರ್​, ಕೆಎಸ್​ಪಿ, ಇ-ಲಾಸ್ಟ್​ ರಿಪೋರ್ಟ್​, ಮಾಹಿತಿ ಹಕ್ಕು, ನಾಗರೀಕ ಕೇಂದ್ರಿತ ತಾಣ, ಟೆಂಡರ್​ ಇ-ಸಂಗ್ರಹಣೆ(ಜಿಇಎಂ) ವೆಬ್​ಸೈಟ್​ ಲಿಂಕ್​ಗಳು ಇದರಲ್ಲಿ ಲಭಿಸಲಿದೆ. ಜೊತೆಗೆ ರಾಜ್ಯ ಸರ್ಕಾರದ ಇತರ ಇಲಾಖೆಗಳ ಮಾಹಿತಿ ಮತ್ತು ಸೇವೆಯನ್ನು ಒದಗಿಸುವ ವೆಬ್​ಸೈಟ್​ಗಳ ಲಿಂಕ್​ಗಳು, ಆಯೋಗಗಳು-ನ್ಯಾಯಾಲಯಗಳ ಮಾಹಿತಿಯೂ ಹೊಸ ಕೆಎಸ್​ಪಿ ವೆಬ್​ಸೈಟ್​ನಲ್ಲಿ ಸಿಗಲಿದೆ. ಇದು ವೆಬ್​ಸೈಟ್​ ವಿಳಾಸ - https://ksp.karnataka.gov.in/