ನ್ಯೂಸ್

ಹೊಸ ವರ್ಷಕ್ಕೆ ಹೊಸ ಕಾನೂನು ಜಾರಿ; ಸಾರ್ವಜನಿಕ ಪ್ರದೇಶಗಳಲ್ಲಿ 'ಬುರ್ಖಾ ನಿಷೇಧ' ಮಾಡಿದ ಸ್ವಿಟ್ಜರ್ಲೆಂಡ್ ಸರ್ಕಾರ | Burqa Ban

ಸ್ವಿಟ್ಜರ್ಲೆಂಡ್: ಸ್ವಿಟ್ಜರ್ಲೆಂಡ್​​ನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ 2025ರ ಜ.1 ರಿಂದ ಇನ್ಮುಂದೆ ಬುರ್ಖಾ ಧರಿದಂತೆ (ಬುರ್ಖಾ ನಿಷೇಧ)(Burqa Ban) ಹೊಸ ಕಾನೂನು ಜಾರಿ ಮಾಡಿದೆ. ಇದು ಬುಧವಾರದಿಂದಲೇ ಆರಂಭವಾಗಿದ್ದು, ನಿಷೇಧವನ್ನು ಅಕ್ರಮವಾಗಿ ಉಲ್ಲಂಘಿಸುವರಿಗೆ 1,000 ಸ್ವಿಸ್ ಫ್ರಾಂಕ್ (ಅಂದಾಜು 1 ಲಕ್ಷ ರೂ.) ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಲ್ಲಿನ ಸ್ವಿಸ್​ ಸರ್ಕಾರ ಘೋಷಿಸಿದೆ.

ಬುರ್ಕಾ ನಿದೇಶದ ಕುರಿತು 2021ರಲ್ಲಿ, ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾ ಮತ್ತು ನಿಖಾಬ್ ಸೇರಿದಂತೆ ಸಾರ್ವಜನಿಕವಾಗಿ ಮುಖದ ಹೊದಿಕೆಗಳನ್ನು ನಿಷೇಧಿಸುವ ಕುರಿತು ಸಾರ್ವಜನಿಕ ಅಭಿಪ್ರಯಯ ಸಂಗ್ರಹಿಸಲಾಗಿತ್ತು. ಅದರಂತೆ ಬುರ್ಕಾ ನಿಷೇಧದ ಪರವಾಗಿ ಶೇ.51.2 ಮತ್ತು ಬುರ್ಕಾ ನಿಷೇಧ ವಿರುದ್ಧ ಶೇ.48.8 ಮತ ಅಭಿಪ್ರಾಯ ಹಿನ್ನೆಲೆ ಸರ್ಕಾರ ಈ ಕಾನೂನು ಜಾರಿ ಮಾಡಿದೆ.

ಈ ನಿಯಮವು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರ್ವಜನಿಕರಿಗೆ ಪ್ರವೇಶಿಸಬಹುದಾದ ಖಾಸಗಿ ಕಟ್ಟಡಗಳಲ್ಲಿ ಮೂಗು, ಬಾಯಿ ಮತ್ತು ಕಣ್ಣುಗಳನ್ನು ಮುಚ್ಚುವುದನ್ನು ನಿಷೇಧಿಸುತ್ತದೆ. ಅಲ್ಲದೆ,ಈ ನಿಷೇಧವು ವಿಮಾನಗಳು ಅಥವಾ ರಾಜತಾಂತ್ರಿಕ ಮತ್ತು ದೂತಾವಾಸದ ಆವರಣದಲ್ಲಿ ಅನ್ವಯಿಸುವುದಿಲ್ಲ ಮತ್ತು ಪೂಜಾ ಸ್ಥಳಗಳು ಮತ್ತು ಇತರ ಪವಿತ್ರ ಸ್ಥಳಗಳಲ್ಲಿ ಮಾಸ್ಕ್ ಸಹ ಧರಿಸಬಹುದುನ ಎಂದು ಸರ್ಕಾರ ಹೇಳಿದೆ.

ಆರೋಗ್ಯ ಮತ್ತು ಸುರಕ್ಷತೆ, ಸ್ಥಳೀಯ ಸಂಪ್ರದಾಯಗಳು ಅಥವಾ ಹವಾಮಾನ ಪರಿಸ್ಥಿತಿಗಳಿಗೆ ಸಂಬಂಧಿಸಿದ ಕಾರಣಗಳಿಗಾಗಿ ಮಾಸ್ಕ್ ಅನುಮತಿಸಲಾಗಿದೆ ಎಂದು ಘೋಷಿಸಿದೆ. ಅಭಿವ್ಯಕ್ತಿ ಮತ್ತು ಸಭೆಯ ಸ್ವಾತಂತ್ರ್ಯವನ್ನು ಚಲಾಯಿಸುವಲ್ಲಿ ವೈಯಕ್ತಿಕ ಭದ್ರತೆಗಾಗಿ ಅಂತಹ ಕ್ರಮಗಳು ಅಗತ್ಯವಿದ್ದರೆ, ಜವಾಬ್ದಾರಿಯುತ ಪ್ರಾಧಿಕಾರದಿಂದ ಮುಂಚಿತವಾಗಿ ಅನುಮೋದಿಸಲ್ಪಟ್ಟಿದ್ದರೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಅವುಗಳನ್ನು ಅನುಮತಿಸಬೇಕು ಎಂದು ಕೆಲ ವಿನಾಯಿತಿಗಳನ್ನು ಸರ್ಕಾರ ನೀಡಿದೆ.(ಏಜೆನ್ಸೀಸ್​)