ನ್ಯೂಸ್

ಡಿಸೆಂಬರ್​ಗೆ ಹೊಸ ಐಟಿ ರೂಲ್ಸ್

ಬಾಬುಪ್ರಸಾದ್​ ಮೋಡಿಸ್​

ನವದೆಹಲಿ: ಹೊಸ ಆದಾಯ ತೆರಿಗೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅನುಕೂಲವಾಗುವಂತೆ ನೂತನ ನಿಯಮಗಳನ್ನು ರೂಪಿಸಲಾಗುತ್ತಿದ್ದು, ಅವುಗಳನ್ನು ಡಿಸೆಂಬರ್ ಅಂತ್ಯದ ವೇಳೆಗೆ ಅಧಿಸೂಚನೆ ಮೂಲಕ ಪ್ರಕಟಿಸಲಾಗುವುದು ಎಂದು ಕೇಂದ್ರ ಸರ್ಕಾರದ ಹಿರಿಯ ತೆರಿಗೆ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಮುಂದಿನ ವರ್ಷದ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ತೆರಿಗೆ ಕಾಯ್ದೆಗೆ ಅಗತ್ಯವಿರುವ ಸರಳೀಕೃತ ಆದಾಯ ತೆರಿಗೆ ಫಾಮರ್್​ಗಳನ್ನು ತಯಾರಿಸುವ ಕೆಲಸ ಪ್ರಗತಿಯಲ್ಲಿದೆ. ಟಿಡಿಎಸ್ ತ್ರೖೆಮಾಸಿಕ ರಿಟರ್ನ್ ಫಾಮ್ರ್, ಐಟಿ ರಿಟರ್ನ್ ಫಾಮ್ರ್ ಮುಂತಾದವು ಇದರಲ್ಲಿ ಸೇರಿವೆ.

ಹೊಸ ಐಟಿ ಕಾಯ್ದೆ ಕುರಿತ ಸಾಮಾನ್ಯ ಪ್ರಶ್ನೋತ್ತರಗಳ ಒಂದು ತಾಜಾ ಕೈಪಿಡಿ, ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್​ಒಪಿ) ಮತ್ತು ಮಾರ್ಗದರ್ಶಿ ಟಿಪ್ಪಣಿಗಳನ್ನೂ ಇಲಾಖೆ ಬಿಡುಗಡೆ ಮಾಡಲಿದೆ. ಹೊಸ ಕಾಯ್ದೆಗೆ ಅನುಗುಣವಾಗಿ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯ ಸದಸ್ಯ ಆರ್.ಎನ್. ಪರ್ಬತ್ ಹೇಳಿದ್ದಾರೆ. ಕಾಯ್ದೆಯ ಹೊಸ ಆವೃತ್ತಿಯಲ್ಲಿ ಭಾಷೆ ಸರಳವಾಗಿರುತ್ತದೆ. ಅನಗತ್ಯ ನಿಯಮಗಳು ಮತ್ತು ಫಾಮರ್್​ಗಳನ್ನು ತೆಗೆದುಹಾಕಲಾಗುವುದು. ಕರಡು ನಿಯಮಗಳನ್ನು ಕೇಂದ್ರ ಹಣಕಾಸು ಸಚಿವರ ಅನುಮೋದನೆಗಾಗಿ ಕಳುಹಿಸಲಾಗುವುದು. ಕಾನೂನು ಇಲಾಖೆಯ ಪರಿಶೀಲನೆ ನಂತರ, ಅಧಿಸೂಚನೆ ಹೊರಡಿಸಲಾಗುವುದು ಎಂದು ವಿವರಿಸಿದರು.