ನವದೆಹಲಿ: ಜೆಎನ್‌ಯು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಒಂಭತ್ತು ಶಂಕಿತರ ಫೋಟೋಗಳನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಜೆಎನ್‌ಯು ಕ್ಯಾಂಪಸ್ ಹಿಂಸಾಚಾರದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಸಂಘಟನೆ ಅಧ್ಯಕ್ಷೆ ಐಷೆ ಘೋಷ್ ಮತ್ತು ಇತರ 8 ಮಂದಿ ಶಂಕಿತರನ್ನು ದೆಹಲಿ ಪೊಲೀಸರು ಶುಕ್ರವಾರ ಹೆಸರಿಸಿದ್ದಾರೆ.
ಪೊಲೀಸರ ಪ್ರಕಾರ, ಚುಂಚುನ್ ಕುಮಾರ್, ಪಂಕಜ್ ಮಿಶ್ರಾ, ಐಷೆ ಘೋಷ್, ವಾಸ್ಕರ್ ವಿಜಯ್, ಸುಚೇತಾ ತಾಲುಡ್ಕರ್, ಪ್ರಿಯಾ ರಂಜನ್, ದೋಲಾನ್ ಸಾವಂತ್, ಯೋಗೇಂದ್ರ ಭಾರಧ್ವಾಜ್, ಮತ್ತು ವಿಕಾಸ್ ಪಟೇಲ್ ಎಂದು ಗುರುತಿಸಲಾಗಿದೆ.
ಯೋಗೇಂದ್ರ ಭಾರಧ್ವಾಜ್ ಮತ್ತು ವಿಕಾಸ್ ಪಟೇಲ್ ಎಬಿವಿಪಿಯವರಾದರೆ ಉಳಿದವರು ಎಡಪಂಥೀಯ ಸಂಘಟನೆಯವರು ಎಂದು ಡಿಸಿಪಿ ಡಾ. ಜಾಯ್ ಟಿರ್ಕೆ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)