ನ್ಯೂಸ್

ಕೋವಿಡ್: ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಡಿಜಿಪಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಪೊಲೀಸ್ ಇಲಾಖೆ, ಪೊಲೀಸರ ಮುಂಜಾಗೃತೆಯ ಬಗ್ಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ರಿಂದ ಮಾರ್ಗಸೂಚಿ ಬಿಡುಗಡೆಯಾಗಿವೆ.

ಹೊಸ ಮಾರ್ಗಸೂಚಿಗಳು ಇಂತಿವೆ

* ಪೊಲೀಸ್ ಸಿಬ್ಬಂದಿಗಳ ಯೋಗಕ್ಷೇಮದ ಕುರಿತು ಎಲ್ಲ ಎಸ್​ಪಿಗಳು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.

* 45 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬಸ್ಥರಿಗೆ 2 ಲಸಿಕೆ ಕಡ್ಡಾಯ.

* ಪೊಲೀಸ್ ಸಿಬ್ಬಂದಿ ನಿಯಮಿತವಾಗಿ ಕೋವಿಡ್ ಪರೀಕ್ಷೆಗೆ ಒಳಪಡತಕ್ಕದ್ದು

* ಕೋವಿಡ್ ಮತ್ತಿತರ ರೋಗಗಳಿಂದ ಬಳಲುತ್ತಿರುವವರು ಕಚೇರಿ ಕರ್ತವ್ಯಕ್ಕೆ ಮಾತ್ರ ನೇಮಿಸಬೇಕು

* ಪೊಲೀಸ್ ಸಿಬ್ಬಂದಿಗಳು 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು.

* ಪೊಲೀಸ್ ಠಾಣೆಗಳ ಹೊರ ಮತ್ತು ಒಳ ಆವರಣ ಸ್ಯಾನಿಟೈಸ್ ಮಾಡತಕ್ಕದ್ದು.

* ಕರ್ತವ್ಯದ ಸಮಯದಲ್ಲಿ ಮಾಸ್ಕ್ ಫೇಸ್ ಶೀಲ್ಡ್ ಕಡ್ಡಾಯ.

* ಪೊಲೀಸ್ ಸಿಬ್ಬಂದಿ ಅವರ ಕುಟುಂಬಸ್ಥರ ನೆರವಿಗೆ ಸಮನ್ವಯಾಧಿಕಾರಿ ನೇಮಿಸತಕ್ಕದ್ದು.

* ಸಾರ್ವಜನಿಕರ ಭೇಟಿಗೆ ಪ್ರತ್ಯೇಕ ವ್ಯವಸ್ಥೆ ಮಾಡತಕ್ಕದ್ದು.

* ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನಿರಾಕರಿಸುವ ಆರೋಗ್ಯ ಭಾಗ್ಯದಡಿ ನೊಂದಾಯಿತ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳತಕ್ಕದ್ದು.

* ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಾಹನ ಸ್ಯಾನಿಟೈಸ್ ಮಾಡತಕ್ಕದ್ದು.

* ಅಪರಾಧಿಗಳ ತನಿಖೆ, ದಸ್ತಗಿರಿಗೆ ಈ ಹಿಂದೆ ಅನುಸರಿಸಿದ ಕ್ರಮ ಮುಂದುವರೆಸಬೇಕು.