ಬೆಂಗಳೂರು: ರಾಜ್ಯದಲ್ಲಿಂದು ಒಂದೇ ದಿನ 1,843 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 25,317 ಕ್ಕೆ ಏರಿದಂತಾಗಿದೆ.
ಕಳೆದ 24 ಗಂಟೆಯಲ್ಲಿ ಗುಣಮುಖರಾದವರ ಸಂಖ್ಯೆ 680 ಆಗಿದ್ದು, ಚೇತರಿಕೆ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಇದರೊಮದಿಗೆ ಈವರೆಗೆ ಗುಣವಾದವರು ಒಟ್ಟು 10,527 ಮಂದಿ. ಒಟ್ಟಾರೆ ಸಾವಿನ ಪ್ರಕರಣಗಳು 401 ಹಾಗೂ ಈವರೆಗಿನ ಸಕ್ರಿಯ ಪ್ರಕರಣಗಳು 14,385 ಆಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ; ಮಾಂಸ ತಿನ್ನಬೇಡಿ; ಬಂದಿದೆ ಮತ್ತೊಂದು ಮಹಾಮಾರಿ; ಚಿಕಿತ್ಸೆ ಲಭಿಸದಿದ್ದಲ್ಲಿ 24 ತಾಸಿನಲ್ಲಿ ಸಾವು; ಚೀನಾ ಎಚ್ಚರಿಕೆ
ಬೆಂಗಳೂರಿನಲ್ಲಿಯೇ ಇಂದೂ ಕೂಡ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಒಟ್ಟು 981 ಜನರು ಸೋಂಕಿಗೆ ಒಳಗಾಗಿದ್ದಾರೆ. ಬಳ್ಳಾರಿಯಲ್ಲಿ 99, ಉತ್ತರಕನ್ನಡದಲ್ಲಿ 81, ಬೆಂಗಳೂರು ಗ್ರಾಮಾಂತರದಲ್ಲಿ 68, ಧಾರವಾಡದಲ್ಲಿ 56 ಹಾಗೂ ಕಲಬುರಗಿಯಲ್ಲಿ 53 ಪ್ರಕರಣಗಳು ಕಂಡು ಬಂದಿವೆ.