ಬೆಂಗಳೂರು: ರೋಟರಿ ಸಂಸ್ಥೆ 119 ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದು. ಈಗ ಹೊಸ ‘ಆಸರೆ ’ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಹಿರಿಯ ನಾಗರಿಕರು ಮತ್ತು ಮಧ್ಯಮ ವರ್ಗದವರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ರೋಟರಿ ಜಿಲ್ಲೆ 3192ರ ಜಿಲ್ಲಾ ಗವರ್ನರ್, ಮಹದೇವಪ್ರಸಾದ್ ಎನ್.ಎಸ್. ತಿಳಿಸಿದ್ದಾರೆ.
ಸೌಲಭ್ಯಗಳು ಹಾಗೂ ಸೇವೆಗಳು:
ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಆಸರೆ ಯೋಜನೆ ಲೋಕಾರ್ಪಣೆಗೊಳಿಸುತ್ತಿದ್ದು, ವೈದ್ಯಕೀಯ ಚಿಕಿತ್ಸೆ, ಆರೋಗ್ಯ ಸೇವೆಗಳು ಸೇರಿ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತುರ್ತು ವೈದ್ಯಕೀಯ ಸೇವೆ, ವೈದ್ಯಕೀಯ ಪರಿಸ್ಥಿತಿಗಳ ನಿರ್ವಹಣೆಗಾಗಿ ಪ್ರತ್ಯೇಕ ಫೋನ್ ಸಂಖ್ಯೆಯನ್ನು ಇಡಲಾಗಿದೆ. ತುರ್ತು ಸಹಾಯವನ್ನು ಒದಗಿಸಲು ವಿ-ಮಿಡೋ ವೈದ್ಯಕೀಯ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಾಗಿದ್ದು, ಇದು ಶೀಘ್ರ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ರೋಟರಿ ಸಂಪರ್ಕಗಳು: ಸಾರ್ವಜನಿಕರಿಗಾಗಿ ಮೀಸಲಿಟ್ಟ ವಾಟ್ಸಾಪ್ ಗುಂಪಿನ ಮೂಲಕ ಸ್ಥಳೀಯ ರೋಟರಿ ಕ್ಲಬ್ಬಿನ ಸದಸ್ಯರೊಂದಿಗೆ ಸಂಪರ್ಕ ಸಾಧಿಸಬಹುದು.ರೋಟರಿ ಯೋಜನೆಗಳನ್ನು ವೀಕ್ಷಿಸಿ, ಪ್ರತಿಕ್ರಿಯೆ ನೀಡಬಹುದು. ಸಾರ್ವಜನಿಕರಿಗೆ ರೋಟರಿ ಕ್ಲಬ್ ನ ಪದಾಧಿಕಾರಿಗಳು ಹಾಗು ಸದಸ್ಯರೊಂದಿಗೆ ನೇರ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು
1.ಶಾಲಾ ಹೆಣ್ಣು ಮಕ್ಕಳಿಗೆ ಉಚಿತ ಸರ್ವಿಕಲ್ ಕಾನ್ಸರ್ ಚುಚ್ಚು ಮದ್ದು ವಿತರಣೆ.
2.ತುರ್ತು ಸಂದರ್ಭ ನಿರ್ವಹಣೆಗೆ ರೋಟರಿಯಿಂದ 24/7 ಸಹಾಯವಾಣಿ 9535534666
3.ಆಯಾ ಪ್ರದೇಶದಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ರೋಟರಿ ಕನೆಕ್ಸ್ ವಾಟ್ಸಾಪ್ ಗುಂಪಿಗೆ ಸೇರಿಸುವುದು.
4.ವಿ ಮಿಡೋ ಸಂಸ್ಥೆಯೊಂದಿಗೆ ಆನ್‌ಲೈನ್ ವೈದ್ಯರ ಸಮಾಲೋಚನೆ ಲಭ್ಯ.
5.ತುರ್ತು ಪರಿಸ್ಥಿತಿಗಳಲ್ಲಿ ಆಂಬ್ಯುಲೆನ್ಸ್ ಸೇವೆ ಮತ್ತು ಆಸ್ಪತ್ರೆಗೆ ಸಾರಿಗೆ ವ್ಯವಸ್ಥೆ