ನೆಟ್ಟಕಲ್ಲಪ್ಪ, ಬಸವನಗುಡಿ ಈಜು ಕೇಂದ್ರಕ್ಕೆ ವಾಟರ್ಪೋಲೋ ಪ್ರಶಸ್ತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನೆಟ್ಟಕಲ್ಲಪ್ಪ ಮತ್ತು ಬಸವನಗುಡಿ ಈಜು ಕೇಂದ್ರದ ತಂಡಗಳು ರಾಜ್ಯ ಸೀನಿಯರ್ ವಾಟರ್ಪೋಲೋ (water polo) ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.
ಬಿಸಿಯು ಬೇಸ್ಕ್ಯಾಂಪ್ನಲ್ಲಿ ಶುಕ್ರವಾರ&ಶನಿವಾರ ನಡೆದ ಕೂಟದಲ್ಲಿ ಬಾಲಕರ ವಿಭಾಗದ ಫೈನಲ್ನಲ್ಲಿ ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್ಎಸಿ) ತಂಡ ಸ್ವಿಮ್ಲೈಫ್ ತಂಡವನ್ನು 18-9 ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟವೇರಿತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಬಸವನಗುಡಿ ಈಜು ಕೇಂದ್ರದ (ಬಿಎಸಿ) ತಂಡ ಸ್ಟಾರ್ ಅಕ್ವಟಿಕ್ಸ್ ವಿರುದ್ಧ 14-9ರಿಂದ ಜಯಿಸಿತು.
ಮಹಿಳೆಯರ ವಿಭಾಗದ ಫೈನಲ್ನಲ್ಲಿ ಬಿಎಸಿ ತಂಡ ಎನ್ಎಸಿ ವಿರುದ್ಧ 24-12ರಿಂದ ಗೆಲುವು ಸಾಧಿಸಿತು. ಕಂಚಿನ ಪದಕದ ಹೋರಾಟದಲ್ಲಿ ಸ್ಟಾರ್ ಅಕ್ವಟಿಕ್ಸ್ ತಂಡ ಮೈಸೂರು ಸ್ವಿಮ್ಮರ್ಸ್ ತಂಡವನ್ನು 17-7ರಿಂದ ಮಣಿಸಿತು.
ಪುರುಷರ ವಿಭಾಗದಲ್ಲಿ ಸ್ವಿಮ್ಲೈಫ್ನ ವಿಶ್ರುತ್ ಚಕ್ರವರ್ತಿ ಮತ್ತು ಮಹಿಳೆಯರ ವಿಭಾಗದಲ್ಲಿ ಎನ್ಎಸಿಯ ಪ್ರವ್ದ ಮಾಲತೇಶ್ ಅತ್ಯುತ್ತಮ ಗೋಲು ಕೀಪರ್ ಪ್ರಶಸ್ತಿ ಪಡೆದರು. ಎನ್ಎಸಿಯ ಹರ್ಷಿತ್ ಬಿ. ಮತ್ತು ಪ್ರಚೇತಾ ಆರ್. ರಾವ್ ಕ್ರಮವಾಗಿ ಪುರುಷ-ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ಆಟಗಾರ-ಆಟಗಾರ್ತಿ ಪ್ರಶಸ್ತಿ ಗೆದ್ದುಕೊಂಡರು.