ನವದೆಹಲಿ: ಟ್ವಿಟರ್ನಲ್ಲಿ ಈಗ ಎಲಾನ್ ಮಸ್ಕ್ ಹೆಸರು ಬಂದರೆ ಸಾಕು, ಏನೋ ಸುದ್ದಿ ನಡೆಯುತ್ತಿದೆ ಎಂದೇ ಜನ ಭಾವಿಸುತ್ತಾರೆ. ಇಂದು (ನ.5) ಎಲಾನ್ ಮಸ್ಕ್ ಹೆಸರಿನ ಖಾತೆಯೊಂದರಲ್ಲಿ ಹಿಂದಿಯಲ್ಲಿ ಟ್ವೀಟ್ ಕಂಡುಬಂದಿದೆ.
ಸುಳ್ಳು ಎಷ್ಟು ಹೊತ್ತು ತಾನೇ ನಿಲ್ಲಲು ಸಾಧ್ಯ? ಟ್ವಿಟರ್ ಖಾತೆಯಲ್ಲಿ ಹ್ಯಾಂಡಲ್ನ ಹೆಸರು ಮಾತ್ರ @iawoolford ಎಂದಿತ್ತು. ಇದು ನೆಟ್ಟಿಗರ ಅನುಮಾನಗಳನ್ನು ದೂರ ಮಾಡಿದೆ. ನಂತರ ಅಕೌಂಟಿನಿಂದ ಹಿಂದಿ ಮೀಮ್ಸ್ಗಳನ್ನು ಪೋಸ್ಟ್ ಮಾಡಲಾಗಿತ್ತು. ಇದರಿಂದ ಈ ಖಾತೆ ಯಾರೋ ತಮಾಷೆಗೆ ಸೃಷ್ಟಿಸಿದ್ದು ಎನ್ನುವುದು ಸ್ಪಷ್ಟವಾಯಿತು. ಈ ಮೀಮ್ಸ್ಗಳು ವೈರಲ್ ಆಗುತ್ತಲೇ ಎಚೆತ್ತುಕೊಂಡ ಟ್ವಿಟರ್, ಅಕೌಂಟ್ಅನ್ನು ತೆಗೆದು ಹಾಕಿದೆ.